ರೈಲು ನಿಲ್ದಾಣದಲ್ಲಿ ಮೂರು ನಿಮಿಷ ಅಶ್ಲೀಲ ವೀಡಿಯೊ ಪ್ರಸಾರ : ದಂಗಾದ ಪ್ರಯಾಣಿಕರು
ಪಟ್ನಾ : ಬಿಹಾರದ ಪಟ್ನಾ ರೈಲು ನಿಲ್ದಾಣದ ಜಾಹಿರಾತು ಪರದೆ ಮೇಲೆ ಮೂರು ನಿಮಿಷಗಳ ಕಾಲ ಅಶ್ಲೀಲ ವೀಡಿಯೊ ಪ್ರಸಾರವಾಗಿದ್ದು, ಪ್ರಯಾಣಿಕರನ್ನು ಮುಜುಗರಕ್ಕೆ ತಳ್ಳಿದ ಘಟನೆ ನಡೆದಿದೆ.
ಭಾನುವಾರ ಮಧ್ಯಾಹ್ನ ರೈಲು ನಿಲ್ದಾಣದಲ್ಲಿ ಅಳವಡಿಸಿದ್ದ ಟಿವಿ ಪರದೆ ಮೇಲೆ ಮೂರು ನಿಮಿಷ ಅಶ್ಲೀಲ ವೀಡಿಯೊ ಪ್ರಸಾರವಾಗಿದೆ. ಕೂಡಲೇ ರೈಲ್ವೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಜಾಹಿರಾತು ಗುತ್ತಿಗೆ ನೀಡಿದ್ದನ್ನು ರದ್ದುಗೊಳಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.