
ಮುಸ್ಲಿಮರ ಆಜಾನ್ ವಿರುದ್ಧ ತೊಡೆತಟ್ಟಿದ ಮುತಾಲಿಕ್ : ದೇವಸ್ಥಾನಗಳಲ್ಲಿ ಹನುಮಾನ್ ಚಾಳಿಸ್

ಬೆಳಗಾವಿ : ಮುಸ್ಲಿಂರ ಆಜಾನ್ ಮೈಕ್ ವಿರುದ್ಧ ಹಿಂದೂ ದೇವಾಲಯದಲ್ಲಿ ಮೇ.9 ರಿಂದ ಹನುಮಾನ ಚಾಲಿಸ್, ಸುಪ್ರಭಾತವನ್ನು ಬೆಳಗ್ಗೆ 5 ಗಂಟೆಗೆ ಮೈಕ್ ನಲ್ಲಿ ಹೇಳಲು ಆಂದೋಲನ ಪ್ರಾರಂಭಿಸಲಾಗಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ತಿಳಿಸಿದರು.
ಗುರುವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಮುಸ್ಲಿಂರ ಆಜಾನ್ ಮೈಕ್ ನ ವಿರುದ್ಧ ರಾಜ್ಯದ 1,000 ಹಿಂದೂ ದೇವಾಲಯಗಳಲ್ಲಿ ಭಜನೆ, ಸುಪ್ರಭಾತ, ಹನುಮಾನ ಚಾಲಿಸ್ ನ್ನು ಮುಸ್ಲಿಂರ ಆಜಾನ್ ಗಿಂತ ದುಪ್ಪಟ್ಟು ಸದ್ದು ಮಾಡುತ್ತೇವೆ ಎಂದು ಸವಾಲ್ ಹಾಕಿದರು.
ನಮ್ಮದ್ದು ಮುಸ್ಲಿಂರ ಆಜಾನ್ ವಿರುದ್ಧ ಹೋರಾಡ ಅಲ್ಲ. ಮೈಕ್ ನ ಕಿರಿಕಿರಿಯಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಸರಕಾರಕ್ಕೆ ವಿನಂತಿ ಮಾಡುತ್ತೇವೆ. ಯುಪಿ ಮಾದರಿಯಲ್ಲಿ 60 ಸಾವಿರ ಮೈಕ್ ಸೀಜ್ ಮಾಡಿದ ಹಾಗೆ ಕರ್ನಾಟಕದಲ್ಲಿಯೂ ಮಾಡಬೇಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದೈರ್ಯ ಮಾಡಿ ಎಂದು ಸಲಹೆ ನೀಡಿದರು. ಸರಕಾರ ಹಾಗೂ ಮುಸ್ಲಿಂರ ವಿರುದ್ಧ ಕ್ರಮ ಕೈಗೊಳ್ಳುವ ತಾಖತ್ತು ಇಲ್ಲ. ಒಂದು ವೇಳೆ ನಮ್ಮ ಮೇಲೆ ಕ್ರಮ ಕೈಗೊಂಡರೆ ಸಂಘರ್ಷವಾಗುತ್ತದೆ ಎಂದು ಎಂದು ಎಚ್ಚರಿಸಿದರು.
ಬಿಜೆಪಿ ಸರಕಾರ ಮುಸ್ಲಿಂ, ಮೈಕ್ ನ ಮೇಲೆ ಕ್ರಮ ಕೈಗೊಳ್ಳದಿದ್ದರೆ, ನಿಮ್ಮ ಮಿಷನ್ 150 ಕನಸು ಸಾಕಾರಗೊಳ್ಳಯವುದಿಲ್ಲ. ಬಿಜೆಪಿಗೆ ಮುಸ್ಲಿಂರ ಒಂದು ಮತ ಬಿಳುವುದಿಲ್ಲ. ಯಾಕೆ ಅವರ ಪರವಾಗಿದ್ದೀರಾ ಎಂದು ಪ್ರಶ್ನಿಸಿದರು. ಕಳೆದ ಹಲವಾರು ವರ್ಷಗಳಿಂದ ಕರ್ನಾಟಕದಲ್ಲಿ ಮುಸ್ಲಿಂರ ಅಜಾನ್ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಆಜಾನ್ ನಿಂತಿಲ್ಲ. ಸುಪ್ರೀಂ ಕೋರ್ಟ್ ಸೂಚನೆ ಉಲ್ಲಂಘನೆಯಾಗುತ್ತಿದೆ ಎಂದರು.
ಉದ್ಧವ ಠಾಕ್ರೆ ತೆಗೆದುಕೊಳ್ಳುವ ಕ್ರಮ ಉದ್ಧಟನತವಾಗಿದೆ. ಅಜಾನ್ ನಿಂದ ಕಿರಿಕಿರಿ ಮಾಡುವ ಮೈಕ್ ವಿರುದ್ಧ ಹಿಂದೂಗಳು ಹೋರಾಟ ಮಾಡಿದರೆ ಅವರ ಮೇಲೆ ಪ್ರಕರಣ ದಾಖಲಿಸುತ್ತಿರಾ. ನಿಮ್ಮ ತಂದೆ ಹಿಂದುತ್ವದ ಪರವಾಗಿ ಹೋರಾಡಿದ ಸೇನಾನಿ ಮುಂದೆ ಶಿವಸೇನೆಗೆ ಜನ ತಕ್ಕ ಪಾಠ ಕಲಿಸುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.