Select Page

Advertisement

ರಾಮದುರ್ಗದಲ್ಲಿ ಹೊಸ ಮುಖಕ್ಕೆ ಮಣೆ ಹಾಕಿದ ಕಮಲ..?

ರಾಮದುರ್ಗದಲ್ಲಿ ಹೊಸ ಮುಖಕ್ಕೆ ಮಣೆ ಹಾಕಿದ ಕಮಲ..?
Advertisement

ರಾಜ್ಯ ರಾಜಕಾರಣದಲ್ಲಿ ತನ್ನದೇ ವೈಶಿಷ್ಟ್ಯ ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಸಧ್ಯ ರಾಜಕೀಯ ಚಟುವಟಿಕೆಗಳು ಜೋರಾಗಿವೆ. ಪ್ರಬಲ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾ ನೇರ ಹೋರಾಟ ಇಲ್ಲಿ ನಡೆಯುತ್ತದೆ. ಆದರೆ ಕಳೆದ ಎರಡು ವರ್ಷಗಳಿಂದ ಉಂಟಾದ ರಾಜಕೀಯ ಬದಲಾವಣೆಗಳಿಂದ ಸಧ್ಯ ಜಿಲ್ಲೆಯಲ್ಲಿ ಸಮಾನ ಸ್ಪರ್ಧೆ ಖಚಿತ ಎಂಬಂತ ಮಾತು ಕೇಳಿಬರುತ್ತಿವೆ.

ಬೆಳಗಾವಿ ಜಿಲ್ಲೆಯಲ್ಲಿ ಸಧ್ಯ ಬಿಜೆಪಿ ಒಂದು ಹೆಜ್ಜೆ ಮುಂದಿದೆ. ಆದರೆ ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ಹಿರಿಯ ಮುಖಂಡ ಬಿ.ಎಲ್ ಸಂತೋಷ್ ನೀಡಿರುವ ಹೇಳಿಕೆ ಅನುಸಾರ ಈ ಬಾರಿ ಹೊಸಬರಿಗೆ ಟಿಕೆಟ್ ನೀಡುವ ಕುರಿತು ಹೇಳಿದ್ದು ಯವಕರಲ್ಲಿ ಮತ್ತಷ್ಟು ಉತ್ಸಾಹ ಮನೆಮಾಡಿದೆ. ಅದೇ ರೀತಿಯಲ್ಲಿ ಬೆಳಗಾವಿಯಲ್ಲಿಯೂ ಹಲವು ಬದಲಾವಣೆ ಮಾಡುವತ್ತ ಬಿಜೆಪಿ ಚಿಂತನೆ ನಡೆಸಿದ್ದು ಯಾವೆಲ್ಲ ತಾಲೂಕುಗಳು ಈ ಪಟ್ಟಿಯಲ್ಲಿ ಸೇರ್ಪಡೆ ಆಗುತ್ತವೆ ಎಂಬುದನ್ನು ನೋಡೋಣ…!

ರಾಮದುರ್ಗ : ಸಧ್ಯ ಬಿಜೆಪಿ ಶಾಸಕರಾದ ಮಹಾದೇವಪ್ಪ ಯಾದವಾಡ ಪ್ರತಿನಿಧಿಸುವ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಕಂಡುಬರುವ ಲಕ್ಷಣ ಇದೆ. ಈ ಬಾರಿ ಹೊಸಬರಿಗೆ ಟಿಕೆಟ್ ನೀಡುವ ಕುರಿತು ಬಿಜೆಪಿ ಪಕ್ಷದ ಮೂಲಗಳಲ್ಲಿ ಚರ್ಚೆಯಾಗಿದ್ದು ಈ ಕುರಿತು ಯಾವೆಲ್ಲ ಯುವ ಮುಖಗಳು ಸದ್ದಿಲ್ಲದೆ ತಯಾರಿ ನಡೆಸಿದ್ದಾರೆ ಎಂಬ ವಿವರ ನಿಮ್ಮ ಮುಂದೆ.

01 ) ಮಲ್ಲಣ್ಣ ಯಾದವಾಡ : ಮಲ್ಲಣ್ಣ ಯಾದವಾಡ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಈಗಾಗಲೇ ಕ್ಷೇತ್ರದ ಮತದಾರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜೊತೆಗೆ ಪ್ರಸ್ತುತ ಶಾಸಕ ಮಹಾದೇವಪ್ಪ ಯಾದವಾಡ ಅವರ ಸಹೋದರರಾಗಿರುವ ಇವರು ಮತದಾರರ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದು ಪ್ಲಸ್ ಪಾಯಿಂಟ್‌. ಈ ಹಿನ್ನಲೆಯಲ್ಲಿ ಬಿಜೆಪಿ ಹೊಸ ಮುಖ ತರಲು ಬಯಸಿದರೆ ಇವರ ಹೆಸರು ಮುಂಚೂನಿಯಲ್ಲಿ ಬರುವ ಎಲ್ಲಾ ಲಕ್ಷಣಗಳಿವೆ.

02 ) ರಮೇಶ್ ದೇಶಪಾಂಡೆ : ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ನಿಷ್ಠಾವಂತ ಕಾರ್ಯಕರ್ತ ಆಗಿರುವ ಇವರು ವೃತ್ತಿಯಲ್ಲಿ ವಕೀಲರು ಹೌದು. ಈ ಹಿಂದಿನ ಜಿಲ್ಲಾ ಪಂಚಾಯತಿ ಸದಸ್ಯರಾಗಿದ್ದ ಇವರು ಬಿಜೆಪಿಯಲ್ಲಿ ಹಲವು ಜವಾಬ್ದಾರಿಗಳನ್ನು ಹೊತ್ತು ಮುನ್ನಡೆಸಿರುವುದು ಇವರ ಪ್ಲಸ್ ಪಾಯಿಂಟ್. ಈ ಹಿಂದೆ ಮಾಜಿ ಕೇಂದ್ರ ಸಚಿವ ದಿ. ಸುರೇಶ್ ಅಂಗಡಿ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೊನೆಯವರೆಗೂ ಇವರ ಹೆಸರು ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇವರನ್ನು ಬಿಜೆಪಿ ಕಣಕ್ಕೆ ಇಳಿಸಿದರು ಅಚ್ಚರಿಯಿಲ್ಲ.

03 ) ವಿಜಯ್ ಗುಡದಾರಿ : ಎಂಬಿಎ ಪದವಿ ಪಡೆದಿರುವ ವಿಜಯ್ ಗುಡ್ಡದಾರಿ ಸಧ್ಯ ರಾಜ್ಯ ಬಿಜೆಪಿ ಸಮಿತಿ ಸದಸ್ಯರಾಗಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುವ ಮೂಲಕ ಬಿಜೆಪಿ ಹಿರಿಯ ಹಾಗೂ ಯುವ ನಾಯಕ ಪ್ರೀತಿಗೂ ಪಾತ್ರರಾಗಿದ್ದಾರೆ. ಪಂಚಮಸಾಲಿ ಸಮುದಾಯದವರಾಗಿರುವ ವಿಜಯ್ ಗುಡದಾರಿ ಬೆನ್ನ ಹಿಂದೆ ಜಾತಿ ಬಲ ಇದ್ದು ಚುನಾವಣೆ ಸಂದರ್ಭದಲ್ಲಿ ಉಪಯುಕ್ತವಾಗುವ ಲಕ್ಷಣ ಗೋಚರಿಸುತ್ತಿದೆ. ಈ ಎಲ್ಲಾ ಅಂಶಗಳನ್ನು ಗುರುತಿಸಿ ಒಂದು ವೇಳೆ ಬಿಜೆಪಿ ಯುವಕರಿಗೆ ಮನೆ ಹಾಕಿದ್ದೇ ಆದರೆ ವಿಜಯ್ ಗುಡದಾರಿ ಅವರೂ ರಾಮದುರ್ಗ ವಿಧಾನಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದರೂ ಅಚ್ಚರಿ ಪಡಬೇಕಿಲ್ಲ.

04 ) ರೇಖಾ ಚಿನ್ನಾಕಟ್ಟಿ : ಮಾಜಿ ತಾಲೂಕು ಪಂಚಾಯತಿ ಸದಸ್ಯೆಯಾಗಿದ್ದರು. ರೇಖಾ ಚಿನ್ನಾಕಟ್ಟಿ ಸಧ್ಯ ಬೆಳಗಾವಿ ಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.‌ ತಮ್ಮದೇ ಒಂದು ಸಮಾನ ಮನಸ್ಕರ ತಂಡ ಕಟ್ಟಿಕೊಂಡು ಜಿಲ್ಲೆಯಾದ್ಯಂತ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಇವರು ಮಹಿಳಾ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಸಧ್ಯ ರಾಜ್ಯದಲ್ಲಿ ಶೇ. 30 ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕೆಂಬ ಹೊಸ ಚಿಂತನೆಯನ್ನು ಬಿಜೆಪಿ ಹೊಂದಿದ್ದು ಈ ಎಲ್ಲಾ ಬೆಳವಣಿಗೆ ಗಮನಿಸಿದರೆ ರಾಮದುರ್ಗ ಕ್ಷೇತ್ರದಲ್ಲಿ ಬಿಜೆಪಿ ವತಿಯಿಂದ ಮಹಿಳಾ ಅಭ್ಯರ್ಥಿಯಾಗಿ ರೇಖಾ ಚಿನ್ನಾಕಟ್ಟಿ ಕಣಕ್ಕೆ ಉಳಿಯಬಹುದು.

ಇನ್ನೂ ಹಲವು ರಾಜಕೀಯ ಮುಖಂಡರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದರು ಹೈಕಮಾಂಡ್ ತಗೆದುಕೊಳ್ಳುವ ನಿರ್ಧಾರ ಅಂತಿಮ. ಈ ನಿಟ್ಟಿನಲ್ಲಿ ಹೊಸ ಬದಲಾವಣೆ ಖಂಡಿತವಾಗಿ ಎಂದು ಪಕ್ಷದ ಮೂಲಗಳು ಆಗಾಗ್ಗೆ ಜನರ ಮುಂದೆ ಇಡುತ್ತಿದ್ದು ಕಾದು ನೋಡಬೇಕಷ್ಟೆ..

———ಬೆಳಗಾವಿ ವೈಸ್ ಸುದ್ದಿಜಾಲ———

Advertisement

Leave a reply

Your email address will not be published. Required fields are marked *

error: Content is protected !!