ಜೈಲಲ್ಲಿ ಕಂಬಿ ಎಣಿಸಿದ ವ್ಯಕ್ತಿ ಆಮ್ ಆದ್ಮಿಗೆ: ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ನೈತಿಕತೆ ಆಪ್ ಗೆ ಇದೆಯೇ..?
ಬೆಳಗಾವಿ : ಕಾಂಗ್ರೆಸ್ ಮತ್ತು ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಆಮ್ ಆದ್ಮಿ ಪಾರ್ಟಿ ಬೆಳಗಾವಿಯಲ್ಲಿ ನಕಲಿ ನೋಟು ಮುದ್ರಿಸಿ ಜೈಲಿಗೆ ಹೋಗಿ ಬಂದಿರುವ ಪ್ರಶಾಂತ ಭಜಂತ್ರಿಗೆ ಪಕ್ಷದಲ್ಲಿ ಸೇರಿಸಿಕೊಂಡು ಕಾಗವಾಡ ಮತಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸುತ್ತಿರುವ ಆಮ್ ಆದ್ಮಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ನೈತಿಕತೆ ಇದೆಯೇ ಎನ್ನುವ ಪ್ರಶ್ನೆ ಉದ್ಬವವಾಗಿದೆ.
ರಾಜ್ಯದಲ್ಲಿ ಭ್ರಷ್ಟಾಚಾರದ ಮುಕ್ತ ಆಡಳಿತ ನೀಡಲಾಗುವುದು. ದೆಹಲಿ ಬದಲಾ ಹೈ.. ಬೆಳಗಾವಿ ಬದಲೇಗಾ ಎಂಬ ಘೋಷ ವಾಕ್ಯದೊಂದಿಗೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಎದುರಿಸಿದ್ದ ಆಮ್ ಆದ್ಮಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ನಡುಕ ಹುಟ್ಟಿಸಿತ್ತು. ಬಳಿಕ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿ ಬೆಳಗಾವಿಯಲ್ಲಿ ಬಿಜೆಪಿಗೆ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದ ಆಮ್ ಆದ್ಮಿ ನಕಲಿ ನೋಟಿನ ಪ್ರಕರಣ ಸೇರಿದಂತೆ ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಶಾಂತ ಭಜಂತ್ರಿಗೆ ಆಮ್ ಆದ್ಮಿ ಪಾರ್ಟಿಯಲ್ಲಿ ಸೇರಿಸಿಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವುದು ಕಾಂಗ್ರೆಸ್ ಹಾಗೂ ಬಿಜೆಪಿಗೆ ಅಸ್ತ್ರವಾಗಿರುವುದಂತು ಸತ್ಯ.
ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಮ್ ಆದ್ಮಿ ಪಾರ್ಟಿ ಸೇರ್ಪಡೆಗೊಂಡ ಬಳಿಕ ಬೆಳಗಾವಿಯಲ್ಲಿ ಸಮಾವೇಶ ನಡೆಸುವ ಸಮಯದಲ್ಲಿ ಜಾಹೀರಾತು ನಾಮಫಲಕಗಳಲ್ಲಿ ನಕಲಿ ನೋಟಿನ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ಪ್ರಶಾಂತ ಭಜಂತ್ರಿ ಆಮ್ ಆದ್ಮಿ ಮುಖಂಡ ಎಂದು ಹೆಸರು ಬರೆದುಕೊಂಡು ಪ್ಲೇಕ್ಸ್ ಅಳವಡಿಸಿದ್ದು ಕಾಂಗ್ರೆಸ್ ಹಾಗೂ ಬಿಜೆಪಿಗೆ ಆಹಾರವಾಗಿತ್ತು.
ಭ್ರಷ್ಟಾಚಾರ ಮುಕ್ತದಿಂದ ದೆಹಲಿ ಹಾಗೂ ಪಂಜಾಬ್ ನಲ್ಲಿ ಸ್ವಚ್ಚ ಆಡಳಿತ ನೀಡುತ್ತಿರುವ ಆಮ್ ಆದ್ಮಿಯತ್ತ ವಿದ್ಯಾವಂತರು, ಸಾಹಿತಿಗಳು ಕರ್ನಾಟಕದಲ್ಲಿ ಆಮ್ ಆದ್ಮಿ ಪರ ಒಲವು ಹೊಂದಿದ್ದಾರೆ. ಇಂಥ ಅಪರಾಧ ಪ್ರಕರಣಗಳ ಹಿನ್ನೆಲೆ ಇರುವ ಪ್ರಶಾಂತ ಭಜಂತ್ರಿಗೆ ಪಕ್ಷದಲ್ಲಿ ಸೇರಿಸಿಕೊಂಡಿದ್ದು ಆಮ್ ಆದ್ಮಿ ಯಾವ ಸಂದೇಶ ಕೊಡಲು ಹೊರಟಿದೆ ಎನ್ನುವ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದಂತು ಸತ್ಯ.