ಸಾಹುಕಾರ್ ಸವದಿಗೆ ಸಂಕ ಏನ್ ಹೇಳಿದ್ದರು.. ?
ಬೆಳಗಾವಿ : ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಚಿಂತಕರ ಚಾವಡಿ ಹಿರಿಯ ಮನೆ ಎಂದು ಕರೆಯುವ ವಿಧಾನ ಪರಿಷತ್ ನಲ್ಲಿ ಈಗ ಯಾರ ಯಾರೋ ಬರತ್ತಿದ್ದಾರೆ ಎಂದು, ಪರೋಕ್ಷವಾಗಿ ಕಾಂಗ್ರೆಸ್ ಶಿಕ್ಷಕ ಮತಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿಗೆ ಟಾಂಗ್ ನೀಡಿದರು.
ಕಾಂಗ್ರೆಸ್ ನ ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಸುನಿಲ್ ಸಂಕ ನಮ್ಮ ಅಥಣಿ ಕ್ಷೇತ್ರದವ. ನನ್ನ ಗೆಳೆಯಾ ಅವನು. ಸಿಕ್ಕಾಗ ಕೇಳಿದೆ ಯಾಕೆ ಈ ಚುನಾವಣೆಗೆ ಸ್ಪರ್ಧೆ ಮಾಡಿ ಅಂದರೆ, ಅವಾ ಹೇಳಿದ ನನಗೆ ಗೊತ್ತಿರಲಿಲ್ಲ. ಇದು ಮೂರು ಜಿಲ್ಲಾ ಬರುತ್ತದೆ ಎಂದು ನನಗೆ ತಿಳಿದಿರಲಿಲ್ಲ ಅಂದಾ. ಅಲ್ಲದೆ, ಹಣಮಂತ ನಿರಾಣಿ ಗೆಲ್ಲುತ್ತಾರೆ ಎಂದು ಆತನೆ ಹೇಳಿದ ಎಂದರು.
ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ನಗರದ ದೇಸಾಯಿ ಗಾರ್ಡನ್ ನಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಹಣಮಂತ ನಿರಾಣಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪದವೀಧರ ಹಿತರಕ್ಷಣೆ ಕಾಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಿರುದ್ಯೋಗ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಮುಖ ಪಾತ್ರವಹಿಸಿದೆ. ಅನೇಕ ಯೋಜನೆಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಹಿನ್ನಲೆಯಲ್ಲಿ ಯುವಕರು ಸುಭದ್ರ ಜೀವನ ನಡೆಸುವಂತಾಗಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಲಕ್ಷಣ ಸವದಿ ಉಪಸ್ಥಿತರಿದ್ದರು.