VIDEO : ನಾ ನಿನ್ನ ಬಿಡಲಾರೆ…. ಹೆಣ್ಮಕ್ಕಳ, ಗಂಡ್ಮಕ್ಕಳ ಬಡಿದಾಟ..!
ಬೆಳಗಾವಿ ನಗರದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರ ಸತಾಯಿಸುವ ಕಿಡಿಗೇಡಿಗಳಿಗೆ ಸಿಂಹ ಸ್ವಪ್ನವಾಗಿದ್ದ ಚನ್ನಮ್ಮ ಪಡೆ ನಿಷ್ಕ್ರೀಯಗೊಂಡ ಮೇಲೆ ಮಹಿಳೆಯರನ್ನು ಚುಡಾಯಿಸುವ ಪ್ರಕರಣಗಳು ಹೆಚ್ಚಾಗಿವೆ. ನಗರದ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಯ ಮುಂಭಾಗದಲ್ಲಿ ಯುತಿಯರನ್ನು ಚುಡಾಯಿಸಿದವನಿಗೆ ಯುವತಿಯವರ ಕಡೆಯಿಂದಲೇ ಹಲ್ಲೆ ಮಾಡಿದ ಘಟನೆ ಸೋಮವಾರ ನಡೆದಿದೆ.
ಹೌದು. ಚನ್ನಮ್ಮ ಪಡೆ ನಿಷ್ಕ್ರೀಯಗೊಂಡಿರುವ ಹಿನ್ನೆಲೆಯಲ್ಲಿ ಯುವತಿಯನ್ನು ಚುಡಾಯಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೆ ನಗರದ ಕ್ಲಬ್ ರಸ್ತೆಯಲ್ಲಿಯನ ನೀರಾವರಿ ಇಲಾಖೆಯ ಮುಂಭಾಗದಲ್ಲಿ ಕುಡುಕನೊರ್ವ ಕಾಲೇಜು ವಿದ್ಯಾರ್ಥಿಗಳನ್ನು ಚುಡಾಯಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರೇ ಆತನನ್ನು ಥಳಿಸಿದ್ದ ಪ್ರಕರಣ ಮಾಸುವ ಮುನ್ನವೇ ಕ್ಲಬ್ ರಸ್ತೆಯ ಕೂಗಳತೆಯ ದೂರದಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿ ಎದುರು ಯುವತಿಯರನ್ನು ಚುಡಾಯಿಸಿದ್ದಕ್ಕೆ ಯುವಕನಿಗೆ ಮನಸೋ ಇಚ್ಚೆ ಸಾರ್ವಜನಿಕ ಸ್ಥಳದಲ್ಲಿ ಥಳಿಸಿದ್ದಾರೆ.
ಘಟನೆ ನಡೆದಿದ್ದು ಇಷ್ಟೆ: ಕೆಲ ದಿನಗಳ ಹಿಂದೆ ಯುವಕರ ತಂಡವೊಂದು ಯುವತಿಯನ್ನು ಚುಡಾಯಿಸಿತ್ತು. ಇದನ್ನೆ ಮನಸ್ಸಿನಲ್ಲಿಟ್ಟುಕೊಂಡ ಯುವತಿಯನ್ನು ತಮ್ಮ ಗುಂಪಿನ ಯುವಕರಿಗೆ ವಿಷಯ ತಿಳಿಸಿದ್ದಾರೆ. ಯುವತಿಯನ್ನು ಚುಡಾಯಿಸಿದ್ದ ಯುವಕರ ಗುಂಪಿನ ಮೇಲೆ ಹೊಂಚು ಹಾಕಿಕೊಂಡು ಕುಳಿತ್ತಿದ್ದ ಯುವತಿಯ ಗುಂಪಿನ ಯುವಕರು ಸೋಮವಾರ ಸಂಜೆ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿ ಎದುರು ಸಿಕ್ಕಾಗ ಮನಸೋ ಇಚ್ಚೆ ಥಳಿಸಿದ್ದಾರೆ. ಇದರಿಂದ ಸ್ಥಳೀಯರು ಯುವಕರ ಜಗಳ ಬಿಡಿಸಲು ಹೋದರು ಕ್ಯಾರೆ ಎಂದಿಲ್ಲ.
ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಅವರು ನಿಷ್ಕ್ರೀಯಗೊಂಡ ಚನ್ನಮ್ಮ ಪಡೆಯನ್ನು ಚುರುಕುಗೊಳಿಸಿ ಯುವತಿಯನ್ನು ಚುಡಾಯಿಸುವ ಕಿಡಿಗೇಡಿಗಳಿಗೆ ಸಿಂಹ ಸ್ವಪ್ನವಾಗಿ ಕಾಡುವಂತೆ ಮಾಡಿದರೆ ಇಂಥ ಪ್ರಕರಣಗಳನ್ನು ಮಟ್ಟ ಹಾಕಲು ಸಾಧ್ಯ. ಇಲ್ಲದಿದ್ದರೇ ಯುವತಿ, ಮಹಿಳೆಯರ ಮೇಲೆ ಇಂಥ ಪ್ರಕರಣಗಳು ನಡೆಯುತ್ತಲೆ ಇರುತ್ತವೆ. ಕೂಡಲೇ ನಿಷ್ಕ್ರೀಯಗೊಂಡ ಚನ್ನಮ್ಮ ಪಡೆಯನ್ನು ನಗರದಲ್ಲಿ ಗಸ್ತು ತಿರುಗಿಸುವಂತೆ ಮಾಡಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.