
ಲಕ್ಷಣ ಸವದಿ ನಿಮ್ಮ ವಿದ್ಯಾರ್ಹತೆ ಎಷ್ಟು…? ಸಂಕನ ಶಂಖನಾದ…!

ಅಥಣಿ : ಹಣಮಂತ ನಿರಾಣಿ ಅವರ ಸೋಲಿನ ಭಯ ಲಕ್ಷ್ಮಣ ಸವದಿ ಅವರಿಗೆ ಕಾಣುತ್ತಿದೆ ಅದಕ್ಕಾಗಿ ಅವರು ಹತಾಶೆ ಮನೋಭಾವದಿಂದ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ತಮ್ಮ ರಾಜಕೀಯ ಅಪ್ರಬುದ್ಧತೆಯನ್ನು ತಾವೇ ಜನರೆದುರು ತೆರೆದಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನೀಲ್ ಸಂಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ
ಅಥಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಹಣಮಂತ ನಿರಾಣಿ ಪರವಾಗಿ ಲಕ್ಷ್ಮಣ ಸವದಿ ಅವರು ಪ್ರಚಾರ ಮಾಡುತ್ತಿದ್ದಾರೆ ಆದರೆ ಹಣಮಂತ ನಿರಾಣಿ ಯಾವ ಒಳ್ಳೇಯ ಕೆಲಸ ಮಾಡಿದ್ದಾರೆ? ಅಥವಾ ಯಾವ ಪದವೀಧರರ ಸಮಸ್ಯೆ ಕುರಿತು ಚಿಂತಕರ ಚಾವಡಿ ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತಿದ್ದಾರೆ ಎಂಬುದನ್ನು ತಿಳಿಸಲಿ ಎಂದ ಸುನೀಲ್ ಸಂಕ ಅಷ್ಟಕ್ಕೂ ಇಷ್ಟೇಲ್ಲಾ ಮಾತನಾಡುವ ಲಕ್ಷ್ಮಣ ಸವದಿ ಅವರ ವಿದ್ಯಾರ್ಹತೆ ಎಷ್ಟು ಎನ್ನುವ ಮೂಲಕ ಟಾಂಗ್ ನೀಡಿದರು.
ಅಲ್ಲದೆ ಅಥಣಿಯ ಸಿದ್ದೇಶ್ವರ ದೇವಸ್ಥಾನದಲ್ಲಿ ಬಂದು ಲಕ್ಷ್ಮಣ ಸವದಿ ಅವರು ಪ್ರಸಾದ ಮುಟ್ಟಿ ನನ್ನ ಭೇಟಿಯಾಗಿದ್ದಾರೆ ಎಂದು ಹೇಳಲಿ. ನಾನು ಬಂದು ಅವರನ್ನು ಭೇಟಿಯಾಗಿಲ್ಲ ಎಂದು ಮುಟ್ಟುವೆ. ಸತ್ಯ ದೇವರಿಗೆ ತಿಳಿಯಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಏನು ಮಾತನಾಡಿದ್ದರು ಸವದಿ : ಬೆಳಗಾವಿಯಲ್ಲಿ ಬುಧವಾರ ನಡೆದಿದ್ದ ಬಿಜೆಪಿ ಪಕ್ಷದ ಸಭೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಚಿಂತಕರ ಚಾವಡಿ ಹಿರಿಯ ಮನೆ ಎಂದು ಕರೆಯುವ ವಿಧಾನ ಪರಿಷತ್ ನಲ್ಲಿ ಈಗ ಯಾರ ಯಾರೋ ಬರತ್ತಿದ್ದಾರೆ ಎಂದು, ಪರೋಕ್ಷವಾಗಿ ಕಾಂಗ್ರೆಸ್ ಶಿಕ್ಷಕ ಮತಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿಗೆ ಟಾಂಗ್ ನೀಡಿದರು.
ಕಾಂಗ್ರೆಸ್ ನ ಪದವೀಧರ ಮತಕ್ಷೇತ್ರದ ಅಭ್ಯರ್ಥಿ ಸುನಿಲ್ ಸಂಕ ನಮ್ಮ ಅಥಣಿ ಕ್ಷೇತ್ರದವ. ನನ್ನ ಗೆಳೆಯಾ ಅವನು. ಸಿಕ್ಕಾಗ ಕೇಳಿದೆ ಯಾಕೆ ಈ ಚುನಾವಣೆಗೆ ಸ್ಪರ್ಧೆ ಮಾಡಿ ಅಂದರೆ, ಅವಾ ಹೇಳಿದ ನನಗೆ ಗೊತ್ತಿರಲಿಲ್ಲ. ಇದು ಮೂರು ಜಿಲ್ಲಾ ಬರುತ್ತದೆ ಎಂದು ನನಗೆ ತಿಳಿದಿರಲಿಲ್ಲ ಅಂದಾ. ಅಲ್ಲದೆ, ಹಣಮಂತ ನಿರಾಣಿ ಗೆಲ್ಲುತ್ತಾರೆ ಎಂದು ಆತನೆ ಹೇಳಿದ ಎಂದರು.