ಬೆಳಗಾವಿ : ಸಾಲಾಗಿ ನಿಂತ ಪೊಲೀಸ್ ವಾಹನ, ಕಾರಣ ಏನು..?
ಬೆಳಗಾವಿ : ನಿರಂತರವಾಗಿ ನಗರದ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಅಪರಾಧ ಕೃತ್ಯಗಳನ್ನು ತಡೆದು ಜನರಿಗೆ ನೆಮ್ಮದಿ ನೀಡುವ ಪೊಲೀಸ್ ಸಿಬ್ಬಂದಿಗಳು ಬಳಸುವ ಎಲ್ಲಾ ವಾಹನಗಳು ಇಂದು ನಗರದ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಸಾಲಾಗಿ ನಿಂತಿದ್ದವು.
ಹೌದು ಮಂಗಳವಾರ ಬೆಳಗಾವಿ ನಗರ ಕಮಿಷನರೇಟ್ ಘಟಕದ ಎಲ್ಲ ವಾಹನಗಳು ಸುಸ್ಥಿತಿಯಲ್ಲಿ ಇರುವ ಬಗ್ಗೆ ವಾರ್ಷಿಕ ತಪಾಸನೆ ನಡೆಸಿ, ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ವಾಹನ ನಿರ್ವಹಣೆ ಕುರಿತು ಸೂಕ್ತ ಸಲಹೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

