ಹರಿಯಾಣ : ಜುಲಾನಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಕುಸ್ತಿ ಪಟು ವಿನೇಶ್ ಫೋಗಟ್ (vinesh phogat)
6 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಸಧ್ಯದ ಚುನಾವಣಾ ಫಲಿತಾಂಶ ಗಮನಿಸಿದರೆ ಹರಿಯಾಣದಲ್ಲಿ ಬಿಜೆಪಿ 50 ಕ್ಷೇತ್ರದಲ್ಲಿ ಮುನ್ನಡೆ ಹೊಂದಿದೆ. ಇನ್ನೂ ಹತ್ತು ವರ್ಷಗಳ ನಂತರ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಗೆ ಮತ್ತೊಂದು ಅಘಾತ ಉಂಟಾಗಿದ್ದು ಕೇವಲ 33 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು ಕೆಲ ಹೊತ್ತಿನಲ್ಲಿ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ.