BREAKING : ಫೆ.16 ವರೆಗೆ ಪಿಯುಸಿ, ಪದವಿ ಕಾಲೇಜುಗಳಿಗೆ ರಜೆ ಮುಂದುವರಿಕೆ
ಬೆಂಗಳೂರು : ಹಿಜಾಬ್ Vs ಕೆಸರಿ ವಿವಾದ ಹಿನ್ನಲೆ ರಜೆ ಘೋಷಣೆ ಮಾಡಲಾಗಿದ್ದ ಪಿಯುಸಿ, ಪದವಿ ಹಾಗೂ ಯುಜಿ ಕಾಲೇಜುಗಳು ಫೆ. 16 ರ ವರೆಗೆ ಬಂದ್ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಪಿಯುಸಿ, ಪದವಿ ಹಾಗೂ ಯುಜಿ ಕಾಲೇಜುಗಳನ್ನು ಬರುವ ಫೆಬ್ರವರಿ 16 ವರೆಗೆ ಬಂದ್ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಇನ್ನೂ ನಿಗದಿಪಡಿಸಿದ ಎಲ್ಲಾ ಪರೀಕ್ಷೆಗಳು ನಿಗದಿತ ಸಮಯದಲ್ಲಿ ನಡೆಯುತ್ತವೆ ಮತ್ತು ಆನ್ ಲೈನ್ ಕ್ಲಾಸ್ ಗಳು ನಡೆಯುತ್ತವೆ ಎಂದು ತಿಳಿಸಲಾಗಿದೆ. ಇನ್ನು ಬರುವ ಸೋಮವಾರದಿಂದ ಎಸ್ ಎಸ್ ಎಲ್ ಸಿ ಶಾಲೆ ಪ್ರಾರಂಭವಾಗಲಿವೆ.