
ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ…!

ಹುಬ್ಬಳ್ಳಿ : ರಾಜಕಾರಣ ಸಾಕಷ್ಟು ಬದಲಾಗಿದೆ. ಮೊದಲಿಗಿಂತಲೂ ಈಗ ಸಾಕಷ್ಟು ಕಲುಷಿತಗೊಂಡಿದೆ. ಯಾರ ಮಾತು ಯಾರೂ ಕೇಳುತ್ತಿಲ್ಲ. ಜನರಿಗೆ ಮೋಸ ಮಾಡುವುದು ಸಾಮಾನ್ಯ ಆಗಿದೆ. ಈ ಹಿನ್ನಲೆಯಲ್ಲಿ ಬರುವ 1 ರಂದು ರಾಜೀನಾಮೆ ಅಂಗಿಕಾರ ಮಾಡುವಂತೆ ಪತ್ರ ನೀಡಿದ್ದೇನೆ ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ವಿಧಾನ ಪರಿಷತ್ ಉಪಸಭಾಪತಿ ಪ್ರಾಣೇಶ್ ಅವರಿಗೆ ಬಸವರಾಜ್ ಹೊರಟ್ಟಿ ಅವರು ತಮ್ಮ ರಾಜಿನಾಮೆ ಪತ್ರವನ್ನು ರವಾನಿಸಿದ್ದು ಮೇ 1ರೊಳಗೆ ತಮ್ಮ ರಾಜೀನಾಮೆಯನ್ನು ಅಂಗೀಕರಿಸಿ ಸಭಾಪತಿ ಹುದ್ದೆಯಿಂದ ಮುಕ್ತಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಇವರು. ಒಳ್ಳೆಯವರನ್ನು ನೆಮ್ಮದಿಯಾಗಿ ಇಟ್ಟುಕೊಳ್ಳಲು ಬಿಡುವುದಿಲ್ಲ. ಇದು ವಿಧಾನಮಂಡಳಕ್ಕೂ ವ್ಯಾಪಿಸಿದೆ. ರಾಜಕೀಯ ವೈಷಮ್ಯ ಹೆಚ್ಚಾಗಿದ್ದು ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ಸಾಧ್ಯವಾಗದಿದ್ದಾಗ ಬೇರೆ ಪ್ರಯತ್ನದಿಂದ ಮಣಿಸಲು ಪ್ರಯತ್ನ ನಡೆದಿದೆ ಎಂದರು.
ಸದನದ ಗೌರವ ಹಾಳಾಗಿ ತುಂಬಾ ದಿನಗಳಾಗಿದೆ. ನಮ್ಮಲ್ಲಿ ಈ ರೀತಿಯ ವಾತಾವರಣಕ್ಕೆ ಅವಕಾಶ ನೀಡಿರಲಿಲ್ಲ. ಕಳೆದ 45. ವರ್ಷದ ಸುಧೀರ್ಘ ರಾಜಕೀಯ ಇತಿಹಾಸದಲ್ಲಿ ಈ ರೀತಿಯ ಪ್ರಕರಣ ಯಾವತ್ತೂ ನೋಡಿಲ್ಲ ಎಂದರು.
ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು