ಕುಮಠಳ್ಳಿಗೆ ಟಿಕೆಟ್ ಸಿಗದಿದ್ದರೆ ನಾನು ಗೋಕಾಕ್ ನಿಂದ ಸ್ಪರ್ಧಿಸಲ್ಲ – ರಮೇಶ್ ಜಾರಕಿಹೊಳಿ
ವಿಜಯಪುರ : ಅಥಣಿಯಲ್ಲಿ ಮಹೇಶ್ ಕುಮಠಳ್ಳಿ ಅವರೇ ಬಿಜೆಪಿ ಅಭ್ಯರ್ಥಿ, ಒಂದುವೇಳೆ ಅವರಿಗೆ ಟಿಕೆಟ್ ಕೊಡದಿದ್ದರೆ ನಾನು ಗೋಕಾಕ್ ನಿಂದ ಸ್ಪರ್ಧಿಸಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಅಥಣಿಯಲ್ಲಿ ಮಹೇಶ್ ಕುಮಠಳ್ಳಿ ಅವರಿಗೆ ಟಿಕೆಟ್ ನೀಡಬೇಕು. ಅವರಿಗೆ ಟಿಕೆಟ್ ಕೊಡದಿದ್ದರೆ ನಾನು ಗೋಕಾಕ್ ನಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ಆಪ್ತನ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಪಕ್ಷಾಂತರ ಕುರಿತು ಮಾತನಾಡಿದ ಇವರು. ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅದಕ್ಕೆ ಹೋಗುವ ಅನವಶ್ಯಕತೆ ಇಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದರು.