ಕಾಂಗ್ರೆಸ್ ಟಿಕೆಟ್ ಸಿಗದಿದ್ದರು ಅಥಣಿಯಿಂದ ಚುನಾವಣೆ ಸ್ಪರ್ಧೆ ಖಚಿತ – ಶಶಿಕಾಂತ ಪಡಸಲಗಿ
ಬೆಳಗಾವಿ : ನಾನು ಅಥಣಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. ಟಿಕೆಟ್ ಸಿಗುವ ಭರವಸೆ ಇದೆ. ಒಂದುವೇಳೆ ಟಿಕೆಟ್ ಸಿಗದಿದ್ದರೂ ಚುನಾವಣೆ ಸ್ಪರ್ಧೆ ಮಾಡುವುದು ನಿಶ್ಚಿತ ಎಂದ ರೈತ ಮುಖಂಡ ಶಶಿಕಾಂತ ಪಡಸಲಗಿ ಹೇಳಿದರು.
ನಗರದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ನಾನು ಕಾಂಗ್ರೆಸ್ ಟಿಕೆಟ್ ಪಡೆಯಲು ಯಾವುದೇ ಅರ್ಜಿ ಸಲ್ಲಿಸಿಲ್ಲ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಹೆಚ್.ಕೆ ಪಾಟೀಲ್ ಸೇರಿದಂತೆ ಪ್ರಮುಖರನ್ನು ಭೇಟಿಮಾಡಿ ಟಿಕೆಟ್ ಬೇಡಿಕೆ ಇಡಲಾಗಿದ್ದು, ಅಥಣಿ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗುವ ನಿರೀಕ್ಷೆ ಇದೆ ಎಂದರು.
ಬಿಜೆಪಿಯಿಂದ ಟಿಕೆಟ್ ಕೇಳಿಲ್ಲ. ಅಲ್ಲಿ ಈಗಾಗಲೇ ಇಬ್ಬರು ಪ್ರಭಲ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ನಾನು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೇಳಿರುವೆ. ಸಧ್ಯಕ್ಕೆ ಇಲ್ಲಿ ಯಾವುದೇ ಪ್ರಭಲ ಅಭ್ಯರ್ಥಿ ಇಲ್ಲದಿರುವ ಹಿನ್ನಲೆ ನನಗೆ ಟಿಕೆಟ್ ಸಿಗುವ ವಿಶ್ವಾಸ ಇದ್ದು, ಒಂದುವೇಳೆ ಟಿಕೆಟ್ ಕೈ ತಪ್ಪಿದರು ಅಥಣಿಯಿಂದ ಸ್ಪರ್ಧೆ ಖಚಿತ ಎಂದರು.