ಅಂಗಿ ಪ್ಯಾಂಟ್ ಕಳಚಿ ರೈಲಿನಲ್ಲಿ ಓಡಾಡಿದ ಶಾಸಕ
ಪಟ್ನಾ : ಸಾಮಾನ್ಯವಾಗಿ ಶಾಸಕರೆಂದರೆ ಒಂದು ಕ್ಷೇತ್ರವನ್ನು ಪ್ರತಿನಿಧಿಸುವರು. ಇವರ ವರ್ತನೆ ಮತ್ತೊಬ್ಬರಿಗೆ ಮಾದರಿಯಾಗಿರಬೇಕು , ಆದರೆ ಬಿಹಾರದ ಈ ಶಾಸಕ ಅಂಗಿ ಪ್ಯಾಂಟ್ ಕಳಚಿಟ್ಟು ಅರಬೆತ್ತಲೆಯಾಗಿ ರೈಲಿನಲ್ಲಿ ಓಡಾಡಿ ಸಹ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಹೌದು ಬಿಹಾರದ ಆಡಳಿತಾರೂಢ ಜೆಡಿಯು ಶಾಸಕ ರೈಲಲ್ಲಿ ಅರಬೆತ್ತಲೆ ಓಡಾಟ ಮಾಡಿರುವ ಆಸಾಮಿ. ಬೀಹಾರದ ಪಟ್ನಾದಿಂದ ದೇಹಲಿಗೆ ತೆರಳುತ್ತಿದ್ದ ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶಾಸಕ ಗೋಪಾಲ್ ಮಂಡಲ್ ತೋರಿದ ಅಸಭ್ಯ ವರ್ತನೆಗೆ ಸಧ್ಯ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ. ಕೇವಲ ಒಳ ಉಡುಪಿನಲ್ಲಿದ್ದ ಶಾಸಕ ರೈತಲ್ಲಿ ಓಡಾಡುವುದನ್ನು ಗಮನಿಸಿದ ಸಹ ಪ್ರಯಾಣಿಕರು ಬಟ್ಟೆ ಹಾಕಿಕೊಳ್ಳುವಂತೆ ತಾಕೀತು ಮಾಡಿದ್ದಾರೆ. ಆದರೆ ಇದ್ಯಾವುದಕ್ಕೂ ತಕೆ ಕೆಡಿಸಿಕೊಳ್ಳದ ಶಾಸಕ ಅವರ ಮೇಲೆ ರೇಗಾಡಿದ್ದಾನೆ ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ಗುರುವಾರ ರಾತ್ರಿ ಪಟ್ನಾದಿಂದ ರೈಲು ಸ್ವಲ್ಪ ದೂರ ಆಕ್ರಮಿಸಿ ಬೆನ್ನಲ್ಲೇ ಈ ಶಾಸಕನ ಹುಚ್ಚಾಟ ಪ್ರಾರಂಭವಾಗಿದೆ. ಎಸಿ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಈತ ಶರ್ಟ್ ಹಾಗೂ ಪ್ಯಾಂಟ್ ಕಳಚಿ ಓಡಾಟ ಪ್ರಾರಂಭಿಸಿದ್ದಾನೆ. ಈ ಸಂದರ್ಭದಲ್ಲಿ ಸಹ ಪ್ರಯಾಣಿಕರು ಪ್ರಶ್ನೆ ಮಾಡಿದಾಗ ಶೂಟ್ ಮಾಡುವುದಾಗಿ ಧಮಕಿ ಹಾಕಿದ್ದು ನಂತರ ರೈಲ್ವೆ ಅಧಿಕಾರಿಗಳು ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಈ ಕುರಿತು ಪತ್ರಕರ್ತರು ಶಾಸಕನನ್ನು ಪ್ರಶ್ನೆ ಮಾಡಿದ್ದು ಇದಕ್ಕೆ ಸಮರ್ಥನೆ ನೀಡಿದ್ದಾನೆ. ನನಗೆ ಹೊಟ್ಟೆ ಸರಿ ಇರಲಿಲ್ಲ. ಆ ಸಂದರ್ಭದಲ್ಲಿ ಅವಸರದಲ್ಲಿ ಶೌಚಾಲಯಕ್ಕೆ ಹೋದೆ. ಈ ಪೋಟೋ ತೆಗೆದು ಯಾರೋ ವೈರಲ್ ಮಾಡಿದ್ದಾರೆ ಎಂದು ಹೇಳಿದ್ದಾನೆ. ಒಟ್ಟಿನಲ್ಲಿ ಈ ಘಟನೆಯಿಂದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಮುಜುಗರಕ್ಕೆ ತಳ್ಳಿದೆ.