ಶಾಸಕ ಮಾಹಾಂತೇಶ ದೊಡಗೌಡರ್ ಮೇಲಿನ ಆರೋಪದ ಹಿಂದಿರುವ ಸತ್ಯ….?
ಬೆಳಗಾವಿ : ಹುಟ್ಟು ಹಬ್ಬದ ನಿಮಿತ್ತವಾಗಿ ಪೊಲೀಸ್ ಅಧಿಕಾರಿಗಳು ಚನ್ನಮ್ಮನ ಕಿತ್ತೂರು ಶಾಸಕ ಮಾಹಾಂತೇಶ ದೊಡಗೌಡರ್ ಗೆ ಹೂವಿನ ಮಳೆ ಸುರಿಸಿದ ವಿಚಾರವಾಗಿ ಸ್ಪಷ್ಟನೆ ನೀಡಿರುವ ಇವರು ಅಲ್ಲಿ ನಡೆದಿರುವ ವಿಚಾರ ಬೇರೆ ಅದನ್ನು ವಿಭಿನ್ನ ರೀತಿಯಲ್ಲಿ ಬಿಂಬಿಸಲಾಗಿದೆ ಎಂದಿದ್ದಾರೆ.
ಬೆಳಗಾವಿ ವಾಯ್ಸ್ ವೈಬ್ ಸೈಟ್ ಸಾಕ್ಷ್ಯಾತ್ ವರದಿ ಪ್ರಕಟಿಸುತ್ತಿದ್ದೇವೆ. ನಾವು ಅನೇಕ ಕಷ್ಟಗಳನ್ನು ಅನುಭವಿಸಿ ರಾಜಕೀಯದಲ್ಲಿ ಬೆಳೆದು ಬಂದವರು ನಮಗೆ ಯಾವುದೇ ರಾಜ ಮರ್ಯಾದೆ ಪಡೆಯುವ ಅವಶ್ಯಕತೆ ಇಲ್ಲ ಎಂದು ಶಾಸಕ ದೊಡ್ಡಗೌಡರ ಸ್ಪಷ್ಟಪಡಿಸಿದ್ದಾರೆ.
ಹುಟ್ಟು ಹಬ್ಬದ ನಿಮಿತ್ತವಾಗಿ ಅಭಿಮಾನಿಗಳು ಸಾಮಾನ್ಯವಾಗಿ ನಮ್ಮ ಮನೆಗೆ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ದಂಪತಿಗಳನ್ನು ಕೂಡಿಸಿ ಪುಷ್ಟಾರ್ಚನೆ ಮಾಡುವುದು ಸಹಜ. ಅದೇ ಸಂದರ್ಭದಲ್ಲಿ ಕ್ಷೇತ್ರದ ಅಧಿಕಾರಿಗಳು ಶಾಸಕರಿಗೆ ಶುಭಾಶಯ ತಿಳಿಸಲು ಮನೆಗೆ ಬಂದಿದ್ದು ಈ ಸಂದರ್ಭದಲ್ಲಿ ಕಾರ್ಯಕರ್ತರು ಅಧಿಕಾರಿಗಳಿಗೆ ಪುಷ್ಪಾರ್ಚನೆ ಮಾಡುವಂತೆ ಬಲವಂತ ಮಾಡಿದ್ದು ಇದರಲ್ಲಿ ಯಾವುದೇ ಕೆಟ್ಟ ಯೋಚನೆ ಇರಲಿಲ್ಲ ಎಂಬುದು ವಾಸ್ತವ. ಕೆಲವು ಮಾಧ್ಯಮಗಳಲ್ಲಿ ಕಪೋಲಕಲ್ಪಿತ ವರದಿ ಮಾಡಲಾಗಿದೆ.
ನಮ್ಮ What’s app ಗ್ರುಪ್ ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.