ಸೋಮವಾರದಿಂದ SSLC ತರಗತಿ ಪ್ರಾರಂಭ : ಸಿಎಂ ಬೊಮ್ಮಾಯಿ
ಬೆಂಗಳೂರು : ಹಿಜಾಬ್ ವಿವಾದ ಹಿನ್ನಲೆ ಮೂರು ದಿನಗಳವರೆಗೆ ರಜೆ ಘೋಷಣೆ ಮಾಡಲಾಗಿದ್ದ ಶಾಲಾ ಕಾಲೇಜು ಪ್ರಾರಂಭ ಮಾಡಲು ಮಹತ್ವದ ನಿರ್ಧಾರ ಪ್ರಕಟಿಸಿದ ರಾಜ್ಯ ಸರ್ಕಾರ ಮೊದಲ ಹಂತವಾಗಿ SSLC ತರಗತಿ ಪ್ರಾರಂಭ ಮಾಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಕೇಳಿಕೆ ನೀಡಿದ್ದಾರೆ.
ಶಾಲಾ ಕಾಲೇಜು ಪ್ರಾರಂಭ ಮಾಡುವಂತೆ ಹೈಕೋರ್ಟ್ ಸೂಚನೆ ನೀಡಿದ್ದ ಹಿನ್ನಲೆಯಲ್ಲಿ ಮಹತ್ವದ ಸಭೆ ನಡೆಸಿ ಮಾತನಾಡಿರುವ ಸಿಎಂ ಬೊಮ್ಮಾಯಿ. ಸೋಮವಾರದಿಂದ ಮೊದಲ ಹಂತದಲ್ಲಿ SSLC ತರಗತಿ ಪ್ರಾರಂಭ ಮಾಡಲಾಗುತ್ತದೆ. ನಂತರ ಬೆಳವಣಿಗೆ ಗಮನಿಸಿ ಪಿಯುಸಿ ಹಾಗೂ ಡಿಗ್ರಿ ಕಾಲೇಜು ಪ್ರಾರಂಭಿಸುವ ನಿರ್ಧಾರ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ.