BREAKING : ಹಿಜಾಬ್ Vs ಕೇಸರಿ, ತಾತ್ಕಾಲಿಕ ಶಾಲೆ ಹೊರಗಿಟ್ಟ ಕೋರ್ಟ್
ಬೆಂಗಳೂರು : ರಾಜ್ಯಾದ್ಯಂತ ಭುಗಿಲೆದ್ದ ಹಿಜಾಬ್ ವಿವಾದದ ಹಿನ್ನಲೆ ಹೈಕೋರ್ಟ್ ನಲ್ಲಿ ನಡೆಯುತ್ತಿರುವ ವಿಚಾರಣೆ ಸೋಮವಾರಕ್ಕೆ ಮುಂದೂಡಲ್ಪಟ್ಟ ಹಿನ್ನೆಲೆ, ರಜೆ ಘೋಷಣೆ ಮಾಡಿರುವ ಶಾಲಾ ಕಾಲೇಜುಗಳು ಪ್ರಾರಂಭಿಸಬೇಕು ಮತ್ತು ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಉಡುಪು ಧರಿಸಿ ಶಾಲೆಗೆ ಬರದಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಹಿಜಾಬ್ ಕುರಿತಾದ ವಿವಾದ ಸಧ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈ ಕುರಿತು ಹೈಕೋರ್ಟ್ ತ್ರಿ ಸದಸ್ಯ ಪೀಠ ವಿಚಾರಣೆ ನಡೆಉತ್ತಿದ್ದು ಸೋಮವಾರದವರೆಗೆ ಮುಂದೂಡಲ್ಪಟ್ಟಿದೆ. ಹಿಜಾಬ್ ವಿವಾದಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು ಯಾವುದೇ ಧಾರ್ಮಿಕ ಉಡುಪು ಧರಿಸಿ ಶಾಲಾ ಕಾಲೇಜಿಗೆ ಮಕ್ಕಳು ಬರದಂತೆ ಯತಾ ಪ್ರಕಾರ ಶಾಲೆ ಪ್ರಾರಂಭಿಸಬೇಕು ಎಂದು ಹೈ ಕೋರ್ಟ್ ಹೇಳಿದೆ.
ಇನ್ನೂ ಶಾಲಾ ಕಾಲೇಜುಗಳನ್ನು ಮರಳಿ ಪ್ರಾರಂಭಿಸುವ ಕುರಿತು ಸಂಜೆ ಸಿಎಂ ಬೊಮ್ಮಾಯಿ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಹಿಜಾಬ್ ವಿವಾದ ಸಧ್ಯಕ್ಕೆ ಬ್ರೇಕ್ ಬಿದ್ದಿದ್ದು ಸೋಮವಾರದ ಕೋರ್ಟ್ ವಿಚಾರಣೆಯಿಂದ ಪ್ರಕರಣಕ್ಕೆ ಅಂತ್ಯ ಸಿಗುವ ನಿರೀಕ್ಷೆ ಇದೆ.