Big Breaking : ಪಾಲಿಕೆ ಆಯುಕ್ತರ ಮೇಲೆ ಭ್ರಷ್ಟಾಚಾರ ಆರೋಪ ಮಾಡಿದ ಹಿರಿಯ ಅಧಿಕಾರಿ
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಕ್ರಮ ವಾಸನೆ ಬರುತ್ತಿದ್ದು, ಪಾಲಿಕೆಯ ಪ್ರಮುಖ ಹುದ್ದೆ ಅಲಂಕರಿಸಿದವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ.
ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ, ಪಾಲಿಕೆ ಅಭಿಯಂತೆ ಲಕ್ಷ್ಮೀ ಸುಳಗೇಕರ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಪಾಲಿಕೆಯ ಕಂದಾಯ ಅಧಿಕಾರಿ ಎಸ್.ಬಿ.ದೊಡಗೌಡರ ಪ್ರಾದೇಶಿಕ ಆಯಕ್ತರಿಗೆ ದೂರು ಸಲ್ಲಿಸಿದ್ದಾರೆ.
ಪಾಲಿಕೆಯ ಆಯುಕ್ತರು ತಮ್ಮ ಪ್ರಭಾವ ಬಿರಿ ಮಾಜಿ ಸೈನಿಕನ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ಆದರೆ ಮಾಜಿ ಸೈನಿಕ ಪಾಲಿಕೆ ಆಸ್ತಿಯನ್ನು ರಕ್ಷಣೆ ಮಾಡುತ್ತಿದ್ದಾರೆ. ಆದರೆ ಇವರ ವಿರುದ್ಧ ಹೋರಾಟ ನಡೆಸುವಂತೆ ಮಾಡುತ್ತಿದ್ದಾರೆ. ಪಾಲಿಕೆಯಲ್ಲಿ ದಕ್ಷ ಐಎಎಸ್ ಅಧಿಕಾರಿಯನ್ನು ಸರಕಾರ ಆಯುಕ್ತರನ್ನಾಗಿ ನೇಮಿಸಿ ಪಾಲಿಕೆಯ ಭ್ರಷ್ಟಾಚಾರದಿಂದ ದೂರ ಇಡುವ ಪ್ರಯತ್ನ ಮಾಡಬೇಕೆಂದು ದೊಡಗೌಡರ ದೂರು ಸಲ್ಲಿಸಿದ್ದಾರೆ.
ಕಳೆದ 1930ರಲ್ಲಿ ಪಾಲಿಕೆಯಿಂದ ಕೆಲ ಜಾಗೆಯಲ್ಲಿ ಎಕ್ಸ್ ಪ್ಲಾಟ್ ಮಾಡಿದ್ದರು. ಪಾಲಿಕೆ ಅಧಿಕಾರಿಗಳು ಶ್ರೀಮಂತರಿಗೆ ಮಾರಾಟ ಮಾಡಿದ್ದಾರೆ. ಪಾಲಿಕೆಯಿಂದ ಲೀಜ್ ಪಡೆದ ಮಳಿಗೆಗಳು ಸಾಕಷ್ಟು ಹಣ ಬರಬೇಕಿದೆ. ಹೊಸದಾಗಿ ಲೀಸ್ ಕೊಡುವ ಬದಲು ಅದನ್ನೆ ಮುಂದುವರಿಸಿಕೊಂಡು ಹೋಗಿದ್ದಾರೆ. ಪಾಲಿಕೆಯ ಕೆಲ ಅಧಿಕಾರಿಗಳು ಬಡವರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳನ್ನು ಬಿಲ್ಡರಗಳಿಗೆ ಮಾರಾಟ ಮಾಡಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ.
1960 ರಲ್ಲಿ ಮಾಳಮಾರುತಿ ಬಡಾವಣೆ ನಿರ್ಮಾಣವಾಯಿತು. ಇದರಲ್ಲಿ 5124 ರೆಸಿಡೆನ್ಸಿಯಲ್ ಪ್ಲಾಟ್ ಗಳ ನಿರ್ಮಾಣ ಮಾಡಿದರು. ಇಲ್ಲಿ 1140 ಸರಕಾರಿ ಇಲಾಖೆಗೆ ನೀಡಿ. ಇವೆಲ್ಲ ಪ್ಲಾಟ್ ಗಳನ್ನು ಲೀಸ್ ಕಂ ಸೇಲ್ ಅಗ್ರಿಮೆಂಟ್ ಮೇಲೆ ಮಾರಾಟ ಮಾಡಿದ್ದಾರೆ ಎಂದು ದೊಡಗೌಡ ಆರೋಪಿಸಿದ್ದಾರೆ.