BREAKING – ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್
ಬೆಂಗಳೂರು : ಮೂಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ಸಿಎಂ ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಆ.29 ರಂದು ಈ ಕುರಿತು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು ಆವರೆಗೆ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಯಾವುದೇ ಆದೇಶ ನೀಡದಂತೆ ಕೋರ್ಟ್ ಸೂಚನೆ ನೀಡುವ ಮೂಲಕ ಮಧ್ಯಂತರ ಆದೇಶ ಹೊರಡಿಸಿದೆ.
ನ್ಯಾ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಸಿಎಂ ಹಾಗೂ ರಾಜ್ಯಪಾಲರ ಪರವಾದ ಸಮಗ್ರ ವಾದವನ್ನು ಆಲಿಸಿ ಮುಂಬರುವ 10 ದಿನಗಳವರೆಗೆ ಕೋರ್ಟ್ ಸಿಎಂ ಅವರಿಗೆ ರಿಲೀಫ್ ನೀಡಿದೆ.
ಸಿಎಂ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಸಮಗ್ರ ವಾದ ಮಂಡಿಸಿದರು. ಜೊತೆ ರಾಜ್ಯಪಾಲರು ಏಕಪಕ್ಷೀಯವಾಗಿ ಸಿಎಂ ವಿರುದ್ಧದ ತನಿಖೆಗೆ ನಿರ್ಧಾರ ಕೈಗೊಂಡಿದ್ದು ಸಾಂವಿಧಾನಿಕ ಹುದ್ದೆಯಲ್ಲಿರುವ ಮಂತ್ರಿ ಮಂಡಲದ ಕೊಟ್ಟ ಸಮಗ್ರ ಉತ್ತರವನ್ನು ರಾಜ್ಯಪಾಲರು ಪರಿಗಣಿಸಿಲ್ಲ ಎಂದು ತಮ್ಮ ವಾದದಲ್ಲಿ ಮಂಡಿಸಿದರು.