ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ್ದ ಯುವತಿಗೆ 5 ಲಕ್ಷ ರೂ ಬಹುಮಾನ
ಬೆಂಗಳೂರು : ರಾಜ್ಯದಲ್ಲಿ ಹಬ್ಬಿರುವ ಹಿಜಾಬ್ ವಿವಾದ ಸಧ್ಯದ ಮಟ್ಟಿಗೆ ತಣ್ಣಗಾಗುವ ಲಕ್ಷಣ ಗೋಚರಿಸುತ್ತಿಲ್ಲ. ನಿನ್ನೆಯಷ್ಟೆ ನೂರಾರು ಕೇಸರಿ ಶಾಲು ಹಾಕಿದ್ದ ಯುವಕರ ಮುಂದೆ ಒಂಟಿಯಾಗಿ “ಅಲ್ಲಾ ಹು ಅಕ್ಬರ್” ( Alla hu akbar ) ಎಂದು ಘೋಷಣೆ ಕೂಗಿದ್ದ ಮಂಡ್ಯದ ಎಂಇಎಸ್ ಕಾಲೇಜು ವಿದ್ಯಾರ್ಥಿನಿಗೆ ಜಮಿಯತ್ ಉಲೆಮಾ – ಎ – ಹಿಂದ್ ( Jamiat Ulema-e-hind ) ಸಂಘಟನೆ ಐದು ಲಕ್ಷ ಬಹುಮಾನ ಘೋಷಣೆ ಮಾಡಿದೆ.
ಹಿಜಾಬ್ vs ಕೇಸರಿ ( Karnataka hijab Controversy ) ಶಾಲು ವಿವಾದ ತಾರಕಕ್ಕೆ ಏರಿದ್ದು, ಮಂಗಳವಾರ ಬುರ್ಕಾ ಧರಿಸಿ ಬಂದಿದ್ದ ಮುಸ್ಲಿಂ ಯುವತಿಯ ಮುಂದೆ ಕೇಸರಿ ಶಾಲು ಹಾಕಿದ್ದ ಯುವಕರು ಜೈ ಶ್ರೀರಾಮ್ ಘೋಷಣೆ ಕೂಗಿದ್ದರು. ಈ ಸಂದರ್ಭದಲ್ಲಿ ಯುವತಿ ಜೋರಾಗಿ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗುವ ಮೂಲಕ ಪ್ರತಿರೋಧ ವ್ಯಕ್ತಪಡಿಸಿದ್ದಳು. ಆದರೆ ಈ ಘಟನೆ ಸಧ್ಯ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ಸಧ್ಯ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಜಮಿಯತ್ ಉಲೆಮಾ – ಎ – ಹಿಂದ್ ಸಂಘಟನೆ ಅಧ್ಯಕ್ಷ ಹಜರತ್ ಮೌಲಾನಾ ಮಹಮ್ಮದ್ ಅಸದ್ ಮದನಿ ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್ ಗೆ ಐದು ಲಕ್ಷ ರೂ ಬಹುಮಾನ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಐಎಂಐಎಂ ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೂಡ ಮಹಿಳೆಯನ್ನು ಕೊಂಡಾಡಿದ್ದಾರೆ. ಆದರೆ ಇದಕ್ಕೆ ಕಡಿಮೆ ಇಲ್ಲವೆಂಬತ್ತೆ ರಾಜ್ಯದ ಸಾವಿರಾರು ಹಿಂದೂ ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸುವ ಮೂಲಕ ಹಿಜಾಬ್ ಗೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ.