3 ದಿನಗಳ ಕಾಲ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಬೆಂಗಳೂರು : ಹಿಜಾಬ್ ವಿವಾದದ ಕಿಚ್ಚು ರಾಜ್ಯಾದ್ಯಂತ ಹಬ್ಬಿದ್ದು ನಾನಾ ಭಾಗಗಳಲ್ಲಿ ಶಾಲಾ ಕಾಲೇಜುಗಳು ರಣರಂಗವಾದ ಹಿನ್ನಲೆ ಬುಧವಾರ ದಿಂದ ಮೂರು ದಿನಗಳ ಕಾಲ ರಾಜ್ಯಾದ್ಯಂತ ಶಲಾ ಕಾಲೇಜುಗಳಿಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ರಜೆ ಘೋಷಣೆ ಮಾಡಿದ್ದಾರೆ.
ಮಂಗಳವಾರ ಮಧ್ಯಾಹ್ನ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿಜಾಬ್ ವಿವಾದದಿಂದ ಹೊಡೆದಾಗ ಬಡಿದಾಟ ಹೆಚ್ಚಾಗುತ್ತಿದ್ದು, ಹೈಸ್ಕೂಲ್, ಪಿಯುಸಿ, ಹಾಗೂ ಡಿಗ್ರಿ ಕಾಲೇಜುಗಳಿಗೆ ಮೂರು ದಿನಗಳ ವರೆಗೆ ರಜೆ ಘೋಷಣೆ ಮಾಡಲಾಗಿದೆ.