Select Page

ಗಾನ ಕೋಗಿಲೆ ಲತಾ ಮಂಗೇಶ್ಕರ್ ಇನ್ನಿಲ್ಲ

ಗಾನ ಕೋಗಿಲೆ ಲತಾ ಮಂಗೇಶ್ಕರ್ ಇನ್ನಿಲ್ಲ

“ಯೇ ಮೇರೆ ವತನ್ ಕೆ ಲೋಗೋ”ಹಾಡಿನ ಮೂಲಕ ಇಡೀ ದೇಶಕ್ಕೆ ದೇಶಭಕ್ತಿಯ ಕಿಚ್ಚು ಹಚ್ಚಿದ್ದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ (92) ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.

ಕೊವಿಡ್ ಸೋಂಕಿಗೆ ತುತ್ತಾಗಿದ್ದ ಲತಾ ಮಂಗೇಶ್ಕರ್ ಕಳೆದ ಒಂದು ತಿಂಗಳಿನಿಂದ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದು ಇಂದು ಸಂಜೆ ಮುಂಬಯಿ ನ ಶಿವಾಜಿ ಪಾರ್ಕ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ( E mere vatgan ke logo )

ಕನ್ನಡದಲ್ಲೂ ಲತಾ ಮಂಗೇಶ್ಕರ್ ಎರಡು ಗೀತೆಯನ್ನು ಹಾಡಿದ್ದರು. ಲತಾ ಮಂಗೇಶ್ಕರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕ್ರಿಕೇಟಿಗ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹವಾಗ್, ರಾಹುಲ್ ಗಾಂಧಿ, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ದೇಶದ ಪ್ರಮುಖರು ಸಂತಾಪ ಸೂಚಿಸಿದ್ದಾರೆ. (Lata Mangeskar)

ಲತಾ ಮಂಗೇಶ್ಕರ್ ಕುರಿತಾದ ಕೆಲವು ಅಚ್ಚರಿ ಅಂಶಗಳು

* ಮಧ್ಯಪ್ರದೇಶ ಇಂದೋರ್ ನಲ್ಲಿ 1929 ಸಪ್ಟೆಂಬರ್ 28 ರಂದು ಜನನ

* 1942 ರಲ್ಲಿ ಗಾಯನ ವೃತ್ತಿ ಆರಂಭ

* ದೇಶ ವಿದೇಶದ ಸುಮಾರು 36 ಭಾಷೆಯಲ್ಲಿ ಹಾಡು ಹಾಡಿದ ಗಾಯಕಿ

*ಕನ್ನಡದಲ್ಲಿ ಎರಡು ಹಾಡು ಹಾಡಿರುವ ಲತಾ ಜೀ

* ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿಯಾಗಿದ್ದ ಲತಾ ಮಂಗೇಶ್ಕರ್

* ಭಾರತ ರತ್ನ, ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನ

*ಲತಾ ಮಂಗೇಶ್ಕರ್ ಅವರನ್ನು ಅಮ್ಮಾ ಎಂದು ಕರೆಯುತ್ತಿದ್ದ ಸಚಿನ್ ತೆಂಡೂಲ್ಕರ್

* ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ಲತಾ ಮಂಗೇಶ್ಕರ್

* 30 ಸಾವಿರಕ್ಕೂ ಹೆಚ್ಚು ಗೀತೆ ಹಾಡಿರುವ ಲತಾ ಮಂಗೇಶ್ಕರ್

Advertisement

Leave a reply

Your email address will not be published. Required fields are marked *

error: Content is protected !!