Select Page

ಬಿಜೆಪಿ ಭೀಷ್ಮ ಲಾಲಕೃಷ್ಣ ಆಡ್ವಾಣಿಗೆ ಭಾರತರತ್ನ

ಬಿಜೆಪಿ ಭೀಷ್ಮ ಲಾಲಕೃಷ್ಣ ಆಡ್ವಾಣಿಗೆ ಭಾರತರತ್ನ

ಬೆಂಗಳೂರು : ಬಿಜೆಪಿ ಭೀಷ್ಮ, ಕಟ್ಟರ್ ಹಿಂದೂ ನಾಯಕ ಹಾಗೂ ಮಾಜಿ ಬಿಜೆಪಿ ಅಧ್ಯಕ್ಷ ಲಾಲಕೃಷ್ಣ ಆಡ್ವಾಣಿ ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ‌ ನೀಡಿ ಗೌರವಿಸಿದೆ.

ಸುಧೀರ್ಘ ರಾಜಕೀಯ ಅನುಭವ ಹೊಂದಿರುವ ಲಾಲಕೃಷ್ಣ ಆಡ್ವಾಣಿ ಅವರು ಆರ್ ಎಸ್ ಎಸ್ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು.‌ ನಂತರ ಜನಸಂಘ ಹಾಗೂ ಬಿಜೆಪಿ ಪಕ್ಷಗಳಲ್ಲಿ ತಮ್ಮದೇ ಸೇವೆ ಸಲ್ಲಿಸಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ನೇಹವಲಯದಲ್ಲಿದ್ದ ಆಡ್ವಾಣಿ ಅವರು ತಮ್ಮ ನೇರ ಮಾತುಗಳಿಂದಲೇ ಜನರಿಗೆ ಹತ್ತಿರವಾದವರು. ಇಂದಿರಾ ಸರ್ಕಾರದ ತುರ್ತು ಪರಿಸ್ಥಿತಿ ಹಾಗೂ ಅಯೋಧ್ಯೆ ರಾಮ ಮಂದಿರಕ್ಕಾಗಿ ಹೋರಾಟ ಇವರ ವೃತ್ತಿಬದುಕಿನ ಶ್ರೇಷ್ಠ ಸಂಗತಿಗಳು.

Advertisement

Leave a reply

Your email address will not be published. Required fields are marked *

error: Content is protected !!