
ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲು ಸಾಧ್ಯವೇ ಇಲ್ಲ – ಗೌಡರ ವಿರುದ್ಧ ಇಬ್ರಾಹಿಂ ಕಿಡಿ ನುಡಿ….!

ಬೆಂಗಳೂರು : ನಾನ್ನನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲು ಸಾಧ್ಯವಿಲ್ಲ. ಒಂದು ಮೂರರಷ್ಟು ಬೆಂಬಲದಿಂದ ನನ್ನ ಸ್ಥಾನ ವಜಾ ಮಾಡಬೇಕಾಗುತ್ತದೆ. ಈ ಕುರಿತು ಚುನಾವಣಾ ಆಯೋಗದ ಗಮನಕ್ಕೂ ತರುವೆ ಎಂದು ಸಿಎಂ ಇಬ್ರಾಹಿಂ ಅಭಿಪ್ರಾಯಪಟ್ಟರು.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಅವರನ್ನು ಉಚ್ಚಾಟನೆ ಮಾಡಿ. ಆಸ್ಥಾನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದ ಜೆಡಿಎಸ್ ನಡೆಗೆ ಇಬ್ರಾಹಿಂ ಆಕ್ರೋಶ ವ್ಯಕ್ತಪಡಿಸಿದರು.
ನನ್ನನ್ನು ಅಧ್ಯಕ್ಷ ಸ್ಥಾನದಿಂದ ದೇವೆಗೌಡರು ತೆರವು ಮಾಡಲು ಬರುವುದಿಲ್ಲ. ಇದಕ್ಕೆ ಬೇರೆ ಮಾರ್ಗ ಅನುಸರಿಸಬೇಕು. ನಾನು ಜೆಡಿಎಸ್ ನಂಬಿ ಬಂದಿದ್ದೆ. ಆದರೆ ನನಗೆ ಮೋಸ ಮಾಡಿ ಹೊರ ಹಾಕುವ ನಿರ್ಧಾರದ ವಿರುದ್ಧ ಸಿಎಂ ಇಬ್ರಾಹಿಂ ಆಕ್ರೋಶ ಹೊರಹಾಕಿದರು.
ನಾನು ಇನ್ನೂ ನಾಲ್ಕು ವರ್ಷದ ಎಂಎಲ್ಸಿ ಅವಧಿ ಇದ್ದರೂ ಅದನ್ನು ಬಿಟ್ಟು ಜೆಡಿಎಸ್ ಪಕ್ಷಕ್ಕೆ ಬಂದೆ. ಇಲ್ಲಿ ಪಕ್ಷ ಸಂಘಟನೆ ಮಾಡಿದ್ದೆ. ಆದರೆ ನನ್ನನ್ನು ದೂರ ತಳ್ಳಿ ಬಿಜೆಪಿ ಜೊತೆ ಕೈ ಜೋಡಿಸಿದ್ದು, ದೇವೆಗೌಡರ ನಡೆಯಿಂದ ಬೆಸರ ಆಗಿದೆ ಎಂದು ಇಬ್ರಾಹಿಂ ಆಕ್ರೋಶ ಹೊರಹಾಕಿದರು.