Select Page

Advertisement

ರಾಜಕಾರಣಿಗಳ‌ ಕಾಲ್ ರೆಕಾರ್ಡ್ ; ವಚನಾನಂದ ಶ್ರೀ ವಿರುದ್ಧ ಗಂಭೀರ ಆರೋಪ..!

ರಾಜಕಾರಣಿಗಳ‌ ಕಾಲ್ ರೆಕಾರ್ಡ್ ; ವಚನಾನಂದ ಶ್ರೀ ವಿರುದ್ಧ ಗಂಭೀರ ಆರೋಪ..!



ದಾವಣಗೆರೆ: ಪಂಚಮಸಾಲಿ ಸಮಾಜ ಟ್ರಸ್ಟ್‌ನ ಸದಸ್ಯರಾದ ಹೆಚ್.ಎಸ್. ನಾಗರಾಜ್ ಅವರು ವಚನಾನಂದ ಶ್ರೀಗಳ ವಿರುದ್ಧ ಇಂದು ಸ್ಫೋಟಕ ಆರೋಪವೊಂದನ್ನು ಮಾಡಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ವಚನಾನಂದ ಶ್ರೀಗಳು ರಾಜ್ಯದ ಹಿರಿಯ ಹಾಗೂ ಪ್ರಮುಖ ರಾಜಕೀಯ ನಾಯಕರೊಂದಿಗೆ ನಡೆಸುವ ದೂರವಾಣಿ ಸಂಭಾಷಣೆಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ. ಈ ರೆಕಾರ್ಡಿಂಗ್‌ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಭ್ಯಾಸವನ್ನು ಅವರು ಮಾಡುತ್ತಿದ್ದಾರೆ,” ಎಂದು ದೂರಿದ್ದಾರೆ.

ಶ್ರೀಗಳ ಈ ನಡೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ನಾಯಕರಿಗೆ ಮತ್ತು ರಾಜಕೀಯ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ಎಂದು ನಾಗರಾಜ್ ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲದೆ, ಯಾವುದೇ ರಾಜಕೀಯ ನಾಯಕರು ಶ್ರೀಗಳೊಂದಿಗೆ ಫೋನ್‌ನಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಮತ್ತು ಅವರೊಂದಿಗೆ ಸಂಭಾಷಣೆ ನಡೆಸಬಾರದು ಎಂದು ಈ ಮೂಲಕ ಮನವಿ ಮಾಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!