ಯರಗಟ್ಟಿ: ತಾಲೂಕಿನ ನುಗ್ಗಾನಟ್ಟಿ ಗ್ರಾಮದ ಬಾಳಪ್ಪ ಮಹಾದೇವಪ್ಪ ಹೊಂಡಪ್ಪನವರ ಇತನು 9 ಕ್ಕೂ ಅಧಿಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ರೌಡಿ ಶೀಟರ್ ನನ್ನು ಮುರಗೋಡ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಳಪ್ಪ ಮಹಾದೇವಪ್ಪ ಹೊಂಡಪ್ಪನವರ (26) ಬಂಧಿತ ಆರೋಪಿ. ಇತನ ಮೇಲೆ 2 ರಾಬರಿ ಪ್ರಕರಣ, 1 ದರೋಡೆ ಪ್ರಕರಣ, 1 ಕೊಲೆ ಪ್ರಯತ್ನ ಪ್ರಕರಣ,1 ಜೂಜಾಟ ಪ್ರಕರಣ, 1 ಅಪಹರಣ ಪ್ರಕರಣ ಮತ್ತು ಎಸ್ ಸಿ ಎಸ್‌ಟಿ ದೌರ್ಜನ್ಯ ಪ್ರಕರಣ, 1 ಕೊಲೆ ಪ್ರಕರಣ, 1 ಖೋಟಾ ನೋಟ ಚಲಾವಣೆ ಪ್ರಕರಣ, 1 ಬಲವಂತದ ಸುಲಿಗೆ, ಸಾಕ್ಷ್ಯ ನಾಶ, (ಹನಿ ಟ್ರ್ಯಾಪಿಂಗ್) ಹಾಗೂ 12 ಮುಂಜಾಗೃತಾ ಕ್ರಮ ಪ್ರಕರಣಗಳಲ್ಲಿ ಈತ ಭಾಗಿ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುರಕ್ಷತೆ ಹಾಗೂ ನೇಮ್ಮದಿ ಶಾಂತಿಗೆ ಹಾಗೂ ಸಾರಕು ಸಾಗಾಟಕ್ಕೆ ತೊಡಕಾಗುವಂತೆ ಚಟುವಟಿಕೆಯಲ್ಲಿ ತೊಡಗಿದ್ದ. ಆರೋಪಿ ಮೇಲೆ ದಾಖಲಾದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಬೆಳಗಾವಿ ಮುರಗೋಡ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಳ್ಳಾರಿ ಜೈಲಿಗೆ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.



