ಬೆಳಗಾವಿ : ಅದು ದಿ. ಉಮೇಶ್ ಕತ್ತಿ ಅವರ ಕುರಿತು ಹೊರತಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ. ರಾಜ್ಯದ ಹಲವಾರು ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಲಕ್ಷಾಂತರ ಜನ ವೇದಿಕೆ ಮುಂಬಾಗ ಕುಳಿತಿದ್ದರು. ಈ ಮಧ್ಯೆ ಕಣ್ಣೀರು ಹಾಕುತ್ತಲೆ ಮಾಜಿ ಸಂಸದ ರಮೇಶ್ ಕತ್ತಿ ಜನರ ಮುಂದೆ ಒಂದು ಶಪಥ ಮಾಡಿದ್ದಾರೆ.

ಬೆಲ್ಲದ ಬಾಗೇವಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಮಾಜಿ ಸಂಸದ ರಮೇಶ್ ಕತ್ತಿ ಕಣ್ಣೀರು ಹಾಕಿದ್ದಾರೆ. ಪ್ರೀತಿಯ ಸಹೋದರ ದಿ. ಉಮೇಶ್ ಕತ್ತಿ ನಿದನದಿಂದ ನಾನು ಬಹಳ ಕುಗ್ಗಿ ಹೋಗಿರುವೆ ಎಂದು ನೆರೆದಿದ್ದ ಜನರ ಮುಂದೆ ನೋವು ತೋಡಿಕೊಂಡಿದ್ದಾರೆ.

60 ವರ್ಷ ಜೊತೆಯಲ್ಲಿ ಇದ್ದ ಎತ್ತು ಒಮ್ಮೆಗೆ ಬಿಟ್ಟು ಹೋದಾಗ ತುಂಬಾ ನೋವಾಗಿತ್ತು. ಇದೇ ಕಾರಣಕ್ಕೆ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿರುವ. ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ನೋಡಿ ಸುಮ್ಮನೇ ಕುಳಿತುಕೊಳ್ಳುದೆ ಆರ್ಭಟಿಸುತ್ತಿರುವೆ ಎಂದರು.

ನಮ್ಮ ಕ್ಷೇತ್ರದಲ್ಲಿ ಬಂದವರನ್ನು ಮುಂಬರುವ ದಿನಗಳಲ್ಲಿ ಅವರ ಕ್ಷೇತ್ರಕ್ಕೆ ತೆರಳಿ ಮನೆಗೆ ಕಳುಹಿಸುವ ಕೆಲಸ ಮಾಡುತ್ತೇನೆ. ಹುಕ್ಕೇರಿಯಿಂದಲೇ ಕ್ರಾಂತಿ ಮುಂದುವರಿಯಲಿದೆ. ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಸಿಡಿದೇಳುವೆ ಎಂದು ಶಪಥ ಮಾಡಿದರು.