ಮನೆ ಬಿಟ್ಟು ಅಲೆಯುವುದೇ ಜೀವನ ; ಕೃಷ್ಣೆಯ ಮಕ್ಕಳ ಕಣ್ಣೀರ ಕಥೆ
ಬೆಳಗಾವಿ : ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಕಾಗವಾಡ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳು ಪ್ರವಾಹಕ್ಕೆ ಒಳಗಾಗಿವೆ. ಈ ಸಂದರ್ಭದಲ್ಲಿ ಜನ ಜಾನುವಾರು ಕಟ್ಟಿಕೊಂಡು ಬೆರೆಡೆಗೆ ಸ್ಥಳಾಂತರ ಆಗುತ್ತಿದ್ದಾರೆ.
ಕೃಷ್ಣಾ ನದಿ ಪ್ರವಾಹ ಪೀಡಿತ ಪ್ರದೇಶದಲ್ಲಿ ವಾಸಿಸುವ ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಭರವಸೆ ನೀಡಿದ್ದ ಹಿಂದಿನ ಸರ್ಕಾರಗಳು ಈ ವರೆಗೂ ಗಂಭೀರವಾಗಿ ತಗೆದೊಂಡಿಲ್ಲ. ಇದರಿಂದ ನದಿ ಪಾತ್ರದ ಜನ ಪ್ರತಿ ವರ್ಷವೂ ಪ್ರವಾಹದಿಂದ ತಪ್ಪಿಸಿಕೊಳ್ಳಲು ಊರೂರು ಅಲೆದಾಡುವಂತ ಪರಿಸ್ಥಿತಿ ಇದೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಪುನರ್ವಸತಿ ಕುರಿತು ಮಾತನಾಡುವ ರಾಜಕೀಯ ಮುಖಂಡರು ಮರಳಿ ಆ ವಿಷಯದ ಕುರಿತು ಮಾತನಾಡುವುದಿಲ್ಲ. ಇದರಿಂದ ಜನ ಪ್ರವಾಹದ ಸಂದರ್ಭದಲ್ಲಿ ಶಪಿಸುತ್ತಾ ಬದುಕು ಸಾಗಿಸುತ್ತಿದ್ದಾರೆ.
ಗಂಟು, ಮೂಟೆ ಕಟ್ಟುವುದೇ ಜೀವನ : ಮಳೆಗಾಲ ಪ್ರಾರಂಭವಾದರೆ ನದಿ ಪಾತ್ರದ ಜನರಿಗೆ ಪ್ರವಾಹದ ಭಯವೇ ಹೆಚ್ಚಾಗುತ್ತದೆ. ಉಕ್ಕಿ ಹರಿಯುವ ನದಿಗಳಿಂದ ಇಡೀ ಗ್ರಾಮಗಳೇ ನಡುಗಡ್ಡೆ ಆಗುವ ಪರಿಸ್ಥಿತಿ ನಿರ್ಮಾವಾಗುವುದರಿಂದ ಜಮ ಕಂಗಾಲಾಗುವುದು ಸರ್ವೇ ಸಾಮಾನ್ಯ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ರೈತರು ಸಧ್ಯ ಪ್ರವಾಹದಿಂದ ತಪ್ಪಿಸಿಕೊಳ್ಳಲು ಹರಸಾಹಸ ಆಡುತ್ತಿದ್ದಾರೆ. ಜಾನುವಾರು ಹಾಗೂ ದಿನಬಳಕೆ ವಸ್ತುಗಳನ್ನು ಕಟ್ಟಿಕೊಂಡು ಊರೂರು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗಂಟು, ಮೂಟೆ ಕಟ್ಟುವುದೇ ಜೀವನ : ಮಳೆಗಾಲ ಪ್ರಾರಂಭವಾದರೆ ನದಿ ಪಾತ್ರದ ಜನರಿಗೆ ಪ್ರವಾಹದ ಭಯವೇ ಹೆಚ್ಚಾಗುತ್ತದೆ. ಉಕ್ಕಿ ಹರಿಯುವ ನದಿಗಳಿಂದ ಇಡೀ ಗ್ರಾಮಗಳೇ ನಡುಗಡ್ಡೆ ಆಗುವ ಪರಿಸ್ಥಿತಿ ನಿರ್ಮಾವಾಗುವುದರಿಂದ ಜಮ ಕಂಗಾಲಾಗುವುದು ಸರ್ವೇ ಸಾಮಾನ್ಯ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ರೈತರು ಸಧ್ಯ ಪ್ರವಾಹದಿಂದ ತಪ್ಪಿಸಿಕೊಳ್ಳಲು ಹರಸಾಹಸ ಆಡುತ್ತಿದ್ದಾರೆ. ಜಾನುವಾರು ಹಾಗೂ ದಿನಬಳಕೆ ವಸ್ತುಗಳನ್ನು ಕಟ್ಟಿಕೊಂಡು ಊರೂರು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಶ್ವರ ಪರಿಹಾರ ಮರಿಚಿಕೆ : ಕೃಷ್ಣಾ ನದಿ ಪ್ರವಾಹ ಪೀಡಿತ ಪ್ರದೇಶದಲ್ಲಿ ವಾಸಿಸುವ ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಭರವಸೆ ನೀಡಿದ್ದ ಹಿಂದಿನ ಸರ್ಕಾರಗಳು ಈ ವರೆಗೂ ಗಂಭೀರವಾಗಿ ತಗೆದೊಂಡಿಲ್ಲ. ಇದರಿಂದ ನದಿ ಪಾತ್ರದ ಜನ ಪ್ರತಿ ವರ್ಷವೂ ಪ್ರವಾಹದಿಂದ ತಪ್ಪಿಸಿಕೊಳ್ಳಲು ಊರೂರು ಅಲೆದಾಡುವಂತ ಪರಿಸ್ಥಿತಿ ಇದೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಪುನರ್ವಸತಿ ಕುರಿತು ಮಾತನಾಡುವ ರಾಜಕೀಯ ಮುಖಂಡರು ಮರಳಿ ಆ ವಿಷಯದ ಕುರಿತು ಮಾತನಾಡುವುದಿಲ್ಲ. ಇದರಿಂದ ಜನ ಪ್ರವಾಹದ ಸಂದರ್ಭದಲ್ಲಿ ಶಪಿಸುತ್ತಾ ಬದುಕು ಸಾಗಿಸುತ್ತಿದ್ದಾರೆ.
2019 ರ ಪ್ರವಾಹ ಮರುಕಳಿಸಿದರೆ ಸಂಕಷ್ಟ ಗ್ಯಾರಂಟಿ : ಉತ್ತರ ಕರ್ನಾಟಕ ಭಾಗದಲ್ಲಿ ಆಗಾಗ್ಗೆ ಕೃಷ್ಣಾ ನದಿ ಪ್ರವಾಹ ಜನರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ಕಳೆದ 2019 ರಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಸಾವಿರಾರು ಜನರ ಬದುಕು ಬೀದಿಗೆ ಬಿದ್ದಿತ್ತು. ಈ ಪ್ರವಾಹದಲ್ಲಿ ಮನೆ ಕಳೆದುಕೊಂಡವರ ಪೈಕಿ ಅನೇಕರಿಗೆ ಇನ್ನೂ ಪರಿಹಾರ ಲಭಿಸಿಲ್ಲ. ಇನ್ನೂ ರಣಬಿಸಿಲಿನಿಂದ ಕಷ್ಟಪಟ್ಟು ಬೆಳೆಗಳನ್ನು ಉಳಿಸಿಕೊಂಡಿದ್ದ ರೈತರಿಗೆ ಮತ್ತೊಮ್ಮೆ ಪ್ರವಾಹ ಎದುರಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮದಲ್ಲಿ ವೇದಗಂಗಾ ನದಿಯ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಜನಜಾನುವಾರುಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುತ್ತಿದೆ. ಪರಿಣಾಮ ವೇದಗಂಗಾ ನದಿಯು ಉಕ್ಕಿ ಹರಿಯುತ್ತಿದೆ. ಇದರಿಂದ ನದಿಯು ತನ್ನ ಪಾತ್ರವನ್ನು ಬಿಟ್ಟು ಹರಿಯುತ್ತಿದೆ. ಸದ್ಯ ವೇದಗಂಗಾ ನದಿಗೆ ಭಾರಿ ಪ್ರಮಾಣದ ಪ್ರವಾಹ ಉಂಟಾಗಿದೆ.
ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮದ ಸುಮಾರು 35 ಮನೆಗಳಿಗೆ ನೀರು ನುಗ್ಗಿದೆ. ಜನರು ತಮ್ಮ ಮನೆಯಲ್ಲಿದ್ದಂತಹ ಮಹತ್ವದ ವಸ್ತುಗಳನ್ನು ಹಾಗೂ ಜಾನುವಾರುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಈಗಾಗಲೇ 135 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಕಾಗವಾಡ ತಾಲೂಕುನ ಅನೇಕ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ಜನ ಮನೆ ತೊರೆಯುತ್ತಿದ್ದಾರೆ. ಇಲ್ಲಿನ ಅನೇಕ ಗ್ರಾಮಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ಜನರು ಸುರಕ್ಷಿತ ಅ್ಥಳಕ್ಕೆ ಕಾಲ್ಕಿತ್ತಿದ್ದಾರೆ. ಸುರಕ್ಷಿತ ಸ್ಥಳಕ್ಕೆ ನಿಯೋಜನೆಗೊಂಡ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದ್ದು ಅಧಿಕಾರಿಗಳು ಈ ಕುರಿತು ಯಾವುದೇ ವ್ಯವಸ್ಥೆ ಮಾಡುತ್ತಿಲ್ಲ ಎಂಬುದು ಜನರ ಆರೋಪ.