Select Page

ಸೀಮಂತ ಮಾಡಿ ಸಂಭ್ರಮಿಸಿದ ಓಯಸಿಸ್ ಫರ್ಟಿಲಿಟಿ

ಸೀಮಂತ ಮಾಡಿ ಸಂಭ್ರಮಿಸಿದ ಓಯಸಿಸ್ ಫರ್ಟಿಲಿಟಿ

ಬೆಳಗಾವಿ : ವಂಶ ಉದ್ಧಾರದ ಕನಸನ್ನು ನನಸು ಮಾಡಲು ನಿರಂತರವಾಗಿ ಶ್ರಮಿಸಿಕೊಂಡು ಬಂದಿರುವ ‘ಓಯಸಿಸ್ ಫರ್ಟಿಲಿಟಿ’ ಈಗ ದೊಡ್ಡದೊಂದು ಮೈಲಿಗಲ್ಲು ಸ್ಥಾಪಿಸಿದೆ. ಬೆಳಗಾವಿ ‘ಓಯಸಿಸ್ ಫರ್ಟಿಲಿಟಿ’ ಕೇಂದ್ರ 500 ರೋಗಿಗಳಿಗೆ ಆರೈಕೆ ನೀಡಿದ ದಾಖಲೆ ಬರೆದಿದ್ದು ಗರ್ಭಿಣಿಯರಿ ಸೀಮಂತ ನೆರವೇರಿಸಿ ಸಂಭ್ರಮಿಸಿದೆ.

ಈಗಾಗಲೇ ಜನರ ವಿಶ್ವಾಸ ಮತ್ತು ಮೆಚ್ಚುಗೆ ಗಳಿಸಿಕೊಂಡಿರುವ ಓಯಸಿಸ್ ಫರ್ಟಿಲಿಟಿ ಅತ್ಯುತ್ತಮ ಫಲಿತಾಂಶ ನೀಡುತ್ತಾ ಬಂದಿದೆ.

OITI, IUI ಮತ್ತು IVF ನಂತಹ ಸುಧಾರಿತ ಕಾರ್ಯವಿಧಾನಗಳ ಮೂಲಕ ತಂದೆ-ತಾಯಿ ಆಗಬೇಕು ಎನ್ನುವ ದಂಪತಿಯ ಕನಸನ್ನು ಓಯಸಿಸ್ ಫರ್ಟಿಲಿಟಿ ನನಸು ಮಾಡುತ್ತಿದೆ. IVF, ICSI ಮತ್ತು PGT-A ಸೇರಿದಂತೆ ಅತ್ಯಾಧುನಿಕ ಚಿಕಿತ್ಸಾ ಕ್ರಮಗಳು ಓಯಸಿಸ್ ಗೆ ಜನಪ್ರಿಯತೆ ತಂದುಕೊಟ್ಟಿವೆ. ರೋಗಿಗಳ ಆರೈಕೆ ಮತ್ತು ಕ್ವಾಲಿಟಿ ಸರ್ವೀಸ್ ಗೆ ಓಯಸಿಸ್ ಹೆಸರಾಗಿದೆ.

ಗರ್ಭಧಾರಣೆಯ ಚಿಕಿತ್ಸೆಗಳಲ್ಲಿ ಶೇ. 60 ರಷ್ಟು ಸಕ್ಸಸ್ ರೇಟ್ ಕಂಡಿದೆ. ಬೆಳಗಾವಿ ವಿಭಾಗದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಇಲ್ಲಿಯ ದಂಪತಿ ಚಿಕಿತ್ಸೆಗಾಗಿ ಮುಂಬೈ ಮತ್ತು ಬೆಂಗಳೂರಿನಂತಹ ಮಹಾನಗರಗಳಿಗೆ ಅಲೆಯುವುದನ್ನು ತಪ್ಪಿಸಿದೆ.

ಆರೋಗ್ಯರ ಪೀಳಿಗೆ ನಿರ್ಮಾಣಕ್ಕೆ ಪ್ರೀ ಇಂಪ್ಲಾಂಟೇಶನ್ ಜೆನೆಟಿಕ್ ಟೆಸ್ಟಿಂಗ್ (PGT-A) ವಿಧಾನ ಅವಳವಡಿಸಿಕೊಂಡಿದೆ.
ಓಯಸಿಸ್ ಫರ್ಟಿಲಿಟಿಯ ಸಹ-ಸಂಸ್ಥಾಪಕಿ ಮತ್ತು ವೈದ್ಯಕೀಯ ನಿರ್ದೇಶಕಿ ಡಾ.ದುರ್ಗಾ ಜಿ ರಾವ್ ಮಾತನಾಡಿ, ನಾವು ನೀಡುತ್ತಿರುವ ಚಿಕಿತ್ಸೆ ನಮಗೆ ತೃಪ್ತಿಕರವಾಗಿದ್ದು ದಂಪತಿಯ ಪೋಷಕರಾಗುವ ಕನಸು ಸಾಕಾರ ಮಾಡುತ್ತಿರುವುದು ಹೆಮ್ಮೆ ತಂದಿದೆ ಎಂದರು.

ಬೆಳಗಾವಿ ವಿಭಾಗ ಮುನ್ನಡೆಸಿಕೊಂಡು ಬಂದಿರುವ ಡಾ. ಶ್ವೇತಾ ಜಿ. ಸೋನ್ವಾಲ್ಕರ್ ಮಾತನಾಡಿ, ಈ ಭಾಗದ ಎಲ್ಲರಿಗೂ ನಮ್ಮ ಸೇವೆ ಸಿಗುವಂತಾಗಬೇಕಿದೆ. ಇದೇ ಕಾರಣಕ್ಕೆ ಮುಂಬರುವ ದಿನಗಳಲ್ಲಿ ಓಯಸಿಸ್ ಫರ್ಟಿಲಿಟಿ ತನ್ನ ವ್ಯಾಪ್ತಿ ವಿಸ್ತರಿಸಲಿದ್ದು ಹೊಸ ಸೆಂಟರ್ ಗಳನ್ನು ತೆರೆಯಲಿದ್ದೇವೆ ಎಂದು ತಿಳಿಸಿದರು.

Advertisement

Leave a reply

Your email address will not be published. Required fields are marked *

error: Content is protected !!