
ಹಿರಿಯರು ಅಂತ ಗೌರವ ಕೊಡುತ್ತಿದ್ದೇನೆ ; ಯತ್ನಾಳ್ ಗೆ ವಿಜಯೇಂದ್ರ ಕೌಂಟರ್

ಬೆಂಗಳೂರು : ತಿಳಿದವರ ಮುಂದೆ ತಲೆ ತಗ್ಗಿಸಿ ನಡೆ, ತುಳಿಯುವವರ ಮುಂದೆ ತಲೆ ಎತ್ತಿ ನಡೆ ಎಂದು ತಂದೆ ಯಡಿಯೂರಪ್ಪನವರು ಕಲಿಸಿ ಕೊಟ್ಟ ಮಾರ್ಗದಲ್ಲಿ ನಾನು ಸಾಗುತ್ತಿರುವೆ. ಒಂದು ಪಕ್ಷದ ಅಧ್ಯಕ್ಷನಾಗಿ ಕಾರ್ಯಕರ್ತರಿಗೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಬಿ.ವೈ ವಿಜಯೇಂದ್ರ ಖಡಕ್ ಉತ್ತರ ನೀಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯಲ್ಲಿ ನಡೆದ ಸಂದರ್ಶನ ಒಂದರಲ್ಲಿ ಮಾತನಾಡಿದ ಇವರು. ಡಿಕೆಶಿ ಜೊತೆ ಒಪ್ಪಂದ ಇದೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ನಾನು ಯಾರ ಜೊತೆ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಒಂದು ಪಕ್ಷದ ಅಧ್ಯಕ್ಷನಾಗಿ ಕಾರ್ಯಕರ್ತರಿಗೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದರು.
ಯಡಿಯೂರಪ್ಪ ಕುಟುಂಬದ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಇವರು. ನಾನು ಎಲ್ಲವನ್ನೂ ಸಂಯಮದಿಂದ ಗಮನಿಸುತ್ತಿರುವೆ. ಎಲ್ಲಾ ಆರೋಪಗಳಿಗೂ ಕಾಲವೇ ಉತ್ತರ ನೀಡುತ್ತದೆ. ಈ ಕುರಿತು ಈಗ ಮಾತನಾಡುವುದಿಲ್ಲ ಎಂದರು.
ಸಿದ್ದರಾಮಯ್ಯ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪದ ಕುರಿತು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಾನಾ ಬಗೆಯ ಕಾರ್ಯತಂತ್ರ ಹೆಣೆಯುತ್ತಿದೆ. ಇದರಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸ್ವಪಕ್ಷದ ಮೇಲೆ ಮುಖಂಡ ಯತ್ನಾಳ್ ದಾಳಿ ನಡೆಸುತ್ತಿದ್ದು ಕಮಲ ಪಡೆಗೆ ಹಿನ್ನಡೆ ಉಂಟುಮಾಡುತ್ತಿದೆ.