
ಹೋರಾಟ ವೇದಿಕೆ ಮೇಲೆ ತಮಿಳು ನಟನಿಗೆ ಕ್ಷಮೆ ಕೇಳಿದ ಶಿವರಾಜಕುಮಾರ್

ಬೆಂಗಳೂರು : ಕಾವೇರಿ ಹೋರಾಟದ ವಿಚಾರವಾಗಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಕನ್ನಡದ ಸಿನಿಮಾ ನಟರು ಒಂದುಗೂಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಇದೇ ವೇದಿಕೆಯಲ್ಲಿ ನಟ ಶಿವರಾಜಕುಮಾರ ತಮಿಳು ನಟ ಸಿದ್ಧಾರ್ಥ ಗೆ ಕ್ಷಮೆ ಕೇಳಿದ್ದಾರೆ.
ಸಿನಿಮಾದ ಪ್ರಮೋಷನ್ ಗಾಗಿ ತಮಿಳು ನಟ ಸಿದ್ಧಾರ್ಥ ಪ್ರೆಸ್ ಮೀಟ್ ಮಾಡುವಾಗ ಕನ್ನಡಪರ ಹೋರಾಟಗಾರರು ಅಡ್ಡಿಪಡಿಸಿದ್ದ ವಿಚಾರವಾಗಿ ಮಾತನಾಡಿದ ಶಿವರಾಜಕುಮಾರ್ ಕ್ಷಮೆ ಕೇಳಿದ್ದಾರೆ.
ಕನ್ನಡ ಸಿನಿಮಾ ಕ್ಷೇತ್ರದ ಕಡೆಯಂದ ಸಿದ್ಧಾರ್ಥ ಅವರೇ ರಿಯಲಿ ಸಾರಿ. ಇಲ್ಲಿ ನಡೆದ ಘಟನೆಯಿಂದ ನನಗೆ ತುಂಬಾ ನೋವಾಗಿದೆ. ಇನ್ನೊಂದು ಸಾರಿ ಈ ರೀತಿ ಮಿಸ್ಟೇಕ್ ಆಗೋದಿಲ್ಲ. ಕನ್ನಡ ಜನ ತುಂಬಾ ಒಳ್ಳೆಯವರು.
ಎಲ್ಲ ಭಾಷೆಯವರನ್ನು ಪ್ರೀತಿಸುತ್ತಾರೆ ಎಂದು ಸ್ಯಾಂಡಲ್‌ವುಡ್ ಸ್ಟಾರ್ ನಟ ಶಿವರಾಜ್ ಕುಮಾರ್ ಕಾವೇರಿ ಹೋರಾಟದ ವೇದಿಕೆಯಲ್ಲಿಯೇ ತಮಿಳು ನಟ ಸಿದ್ಧಾರ್ಥ್‌ಗೆ ಕ್ಷಮೆ ಕೇಳಿದ್ದಾರೆ.
ಅನ್ಯ ಭಾಷೆಯ ಸಿನಿಮಾದ ಪ್ರಮೋಷನ್ ಪ್ರೆಸ್ ಮೀಟ್ ಮಾಡುವಾಗ ಕೆಲವರು ಅಡ್ಡಿಪಡಿಸಿದ್ದಾರೆಂಬ ವಿಚಾರ ತಿಳಿದು ನನಗೆ ತುಂಬಾ ನೋವಾಯಿತು. ಇವತ್ತು ನಾವು ಕನ್ನಡ ಸಿನಿಮಾ ಕ್ಷೇತ್ರದ ಕಡೆಯಂದ ಸಿದ್ಧಾರ್ಥ ಅವರೇ ರಿಯಲಿ ಸಾರಿ.
ಇನ್ನೊಂದು ಸಾರಿ ಈ ರೀತಿ ಮಿಸ್ಟೇಕ್ ಆಗೋದಿಲ್ಲ. ಕನ್ನಡ ಜನ ತುಂಬಾ ಒಳ್ಳೆಯವರು. ಎಲ್ಲ ಭಾಷೆಯವರನ್ನು ಪ್ರೀತಿಸುತ್ತಾರೆ, ಎಲ್ಲ ಭಾಷೆಯ ಸಿನಿಮಾಗಳನ್ನು ನೋಡ್ತಾರೆಂದರೆ ಅದು ಕನ್ನಡ ಮತ್ತು ಕರ್ನಾಟಕ ಜನತೆ ಮಾತ್ರವೇ. ಇವತ್ತು ನಾವು ಜಗತ್ತಿನಲ್ಲಿ ಹೆಮ್ಮೆಯಿಂದ ಎಲ್ಲಿಯಾದರೂ ಹೇಳಿಕೊಳ್ಳಬಹುದು.
ಕರ್ನಾಟಕ ಜನತೆಗೆ ಈಗಾಗಲೇ ಒಂದುಯ ಮರ್ಯಾದೆ ಇದೆ ಅದನ್ನು ನಾವು ಕಾಪಾಡಿಕೊಳ್ಳಬೇಕು ಎಂದರು.