
ಲಕ್ಷ್ಮಣ ಸವದಿ ನನಗೆ ಹಿರಿಯ ಸಹೋದರ ಇದ್ದಂತೆ – ರಮೇಶ್ ಕತ್ತಿ ಹೇಳಿಕೆ ಹಿಂದಿನ ನಡೆ ಏನು..?

ಅಥಣಿ : ಲಕ್ಷ್ಮಣ ಸವದಿ ನನಗೆ ಸಹೋದರ ಇದ್ದಂತೆ. ಕೆಲವು ವಿಚಾರಗಳನ್ನು ಸಹೋದರ ಆದವರ ಬಳಿ ಹಂಚಿಕೊಳ್ಳಬೇಕು. ಆ ಕಾರಣಕ್ಕೆ ಇವತ್ತಿನ ಭೇಟಿ ಎಂದು ಮಾಜಿ ಸಂಸದ ರಮೇಶ್ ಕತ್ತಿ ಹೇಳಿದ್ದಾರೆ.
ಶುಕ್ರವಾರ ಅಥಣಿ ತಾಲೂಕಿನ ನಾಗನೂರ ಗ್ರಾಮದಲ್ಲಿ ನಡೆಸ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ರಮೇಶ್ ಕತ್ತಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮನೆಗೆ ಭೇಟಿ ನೀಡಿದ್ದು ಇದರ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿವೆ.
ಮಾಜಿ ಡಿಸಿಎಂ ಹಾಗೂ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಮನೆಗೆ ಭೇಟಿ ನೀಡಿದ್ದ ವಿಚಾರವಾಗಿ ಮಾತನಾಡಿದ ಅವರು. ಅಣ್ಣ ದಿ. ಉಮೇಶ್ ಕತ್ತಿ ತೀರಿಹೋದ ಮೇಲೆ ಆ ಸ್ಥಾನದಲ್ಲಿ ಲಕ್ಷ್ಮಣ ಸವದಿ ಇದ್ದಾರೆ. ನಮ್ಮದು ಕಳೆದ 30 ವರ್ಷಗಳ ಸ್ನೇಹ. ರಾಜಕೀಯ ಹೊರತಾದ ಭೇಟಿ ನಡೆದಿದೆ ಎಂದು ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗುವ ವಿಶ್ವಾಸ ಇತ್ತು. ಆದರೆ ಪಕ್ಷದ ನಾಯಕರು ಹೇಳಿದ ಮಾತಿನಿಂದ ಸುಮ್ಮನಾಗಿದ್ದೆ. ರಾಜ್ಯಸಭೆ ಹಾಗೂ ಪರಿಷತ್ ಸ್ಥಾನ ನೀಡುವ ಭರವಸೆ ಈಡೇರಲಿಲ್ಲ. ಆದರೆ ಈ ಬಾರಿ ಪಕ್ಷ ಟಿಕೆಟ್ ನೀಡುವ ವಿಶ್ವಾಸ ಇದೆ.