ಸಿದ್ದರಾಮಯ್ಯ ಪರ ಘೋಷಣೆ ; ಕೈ ಮುಗಿಯುವೆ ಸುಮ್ಮನಾಗಿ ಎಂದ ಡಿಕೆಶಿ
ಮೈಸೂರು : ಮೂಡಾ ಹಗರಣ ವಿರೋಧಿಸಿ ಇತ್ತ ಬಿಜೆಪಿ ಪಾದಯಾತ್ರೆ ಕೈಗೊಂಡಿದ್ದರೆ, ಅವರ ವಿರುದ್ಧ ಕಾಂಗ್ರೆಸ್ ಮೈಸೂರಿನಲ್ಲಿ ಜನಾಂದೋಲನ ಸಮಾವೇಶ ಆಯೋಜನೆ ಮಾಡುವ ಮೂಲಕ ಸೆಡ್ಡು ಹೊಡೆದಿದೆ.
ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಭಾಷಣ ಮಾಡುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ಪ್ರಸ್ತಾಪ ಮಾಡಿದ್ದೇ ತಡ, ನೆರೆಸಿದ್ದ ಜನ ಸಿಎಂ ಪರ ಘೋಷಣೆ ಹಾಕತೊಡಗಿದರು. ಈ ಸಂದರ್ಭದಲ್ಲಿ ಕೆಲಹೊತ್ತು ಡಿಕೆಶಿ ಮೌನವಾದ ಪ್ರಸಂಗ ನಡೆಯಿತು.
ಜನರ ಕಿರುಚಾಟಕ್ಕೆ ಡಿಸಿಎಂ ಶಿವಕುಮಾರ್ ಅವರಿಗೆ ಮಾತನಾಡಲೂ ಸಾಧ್ಯವಾಗಲಿಲ್ಲ. ನಂತರ ಜನರಿಗೆ ಸಮಾಧಾನ ಹೇಳಿದರೂ ಯಾರೂ ಶಾಂತವಾಗಲಿಲ್ಲ. ಕೊನೆಗೆ ನಿಮ್ಮ ಕೈ ಮುಗಿಯುತ್ತೇನೆ ಎಂದು ಡಿಸಿಎಂ ಕೇಳಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಬಿಜೆಪಿ ಹಾಗೂ ಜೆಡಿಎಸ್ ಜೊತೆಗೂಡಿ ಸರ್ಕಾರದ ವಿರುದ್ಧ ಪಾದಯಾತ್ರೆ ಕೈಗೊಂಡ ಹಿನ್ನಲೆಯಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶದ ಮೂಲಕ ತಕ್ಕ ಉತ್ತರ ನೀಡಲು ಮುಂದಾಗಿದೆ. ಬಿಜೆಪಿ ವಿರುದ್ಧದ ಭ್ರಷ್ಟಾಚಾರ ಆರೋಗಳ ಕುರಿತು ಕಾಂಗ್ರೆಸ್ ಆರೋಪ ಮಾಡಿದೆ.
.