
VIDEO – ಭಾರತ್ ಮಾತಾಕೀ ಜೈ ಎಂದವರಿಂದ ಅತ್ಯಾಚಾರ : ನಿಪ್ಪಾಣಿಯಲ್ಲಿ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ

ಚಿಕ್ಕೋಡಿ : ಭಾರತ್ ಮಾತಾಕೀ ಜೈ ಎನ್ನುವವರಿಂದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿವೆ ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಿಪ್ಪಾಣಿ ಪಟ್ಟಣದಲ್ಲಿ ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ, ‘ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ್ ವಿನೂತನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ನೀವು ಭಾರತ್ ಮಾತಾಕೀ ಜೈ ಎನ್ನುತ್ತಿರಿ. ಭಾರತ ಮಾತಾಕೀ ಜೈ ಎನ್ನುವವರು 8 ವರ್ಷ, 10 ವರ್ಷ ವಯಸ್ಸಿನ ಮಕ್ಕಳನ್ನ ರೇಪ್ ಮಾಡ್ತಿರಲ್ಲರಿ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಒಂದು ದಿನಕ್ಕೆ 6 ಜನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತೆ ಅಂತಾ ಕ್ರೈಂ ವರದಿ ಹೇಳುತ್ತದೆ ಎಂದಿದ್ದಾರೆ ಸ್ವಾಮೀಜಿ.
ಇನ್ನು ಇದೇ ವೇಳೆ ಮಹಾಭಾರತದಲ್ಲಿ ನಡೆಯುವ ದ್ರೌಪದಿ ವಸ್ತ್ರಾಪಹರಣ ವಿಷಯನ್ನು ಪ್ರಸ್ತಾಪಿಸಿದ ಅವರು, ನನ್ನ ಪ್ರಶ್ನೆ ಏನಂದರೆ ಮಹಾಭಾರತದಲ್ಲಿ ದ್ರೌಪದಿಯ ಸೀರೆ ಸೆಳೆಯುವಾಗ ಕೃಷ್ಣಾ ಅಂದ ತಕ್ಷಣ ಸೀರೆ ತಂದು ಕೊಟ್ಟ ಶ್ರೀ ಕೃಷ್ಣ ಈಗ ಎಲ್ಲಿದ್ದನ್ನಪ್ಪಾ ? ವೇರ್ ಇಸ್ ಕೃಷ್ಣಾ ಎಂದು ಕುಹುಕ ನುಡಿದಿದ್ದಾರೆ.