Select Page

Advertisement

ಗಮನ ಸೆಳೆದ ಆರ್ ಎಸ್ ಎಸ್ ಪಥಸಂಚಲನ

ಗಮನ ಸೆಳೆದ ಆರ್ ಎಸ್ ಎಸ್ ಪಥಸಂಚಲನ

ಬೆಳಗಾವಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಗರದಲ್ಲಿ ಆಕರ್ಷಕ ಪಥಸಂಚಲನ ಹಾಗೂ ಸಾರ್ವಜನಿಕ ಸಮಾರಂಭ ಆಯೋಜಿಸಲಾಗಿತ್ತು.‌

ಭಾನುವಾರ ನಗರದ ಶಿರಸಂಗಿ ಲಿಂಗರಾಜ್ ಕಾಲೇಜು ಆವರಣದಿಂದ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಸ್ವಯಂ ಸವೇವಕ ಸದಸ್ಯರು ಪಥಸಂಚಲನ ಪ್ರಾರಂಭಿಸಿದರು.‌ ಗಣವೇಷಾಧಾರಿಗಳು ಶಿಸ್ತಿನಿಂದ ನಗರದ ಹಲವು ಮಾರ್ಗಗಳಲ್ಲಿ ಸಂಚರಿಸಿದ ಪಥಸಂಚಲನ ಕೊನೆಗೆ ಲಿಂಗರಾಜ ಕಾಲೇಜು ಕ್ರೀಡಾಂಗಣ ತಲುಪಿತು.

ಸಾವಿರಾರು ಗಣವೇಷಧಾರಿಗಳು ಶಿಸ್ತಿನ ಸಿಪಾಯಿಗಳಂತೆ ನಡೆದರೆ ಇತ್ತ ಪಥ ಸಂಚನಕ್ಕೆ ವಾದ್ಯಗೋಷ್ಠಿ ಮೆರುಗು ತಂದಿತು. ಪಥ ಸಂಚಲನ ಸಾಗೋ ಮಾರ್ಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಾಲೇಜ್ ರೋಡ್, ಲಿಂಗರಾಜ್ ಚೌಕ್, ಸರ್ದಾರ್ ಹೈಸ್ಕೂಲ್ ಕಾರ್ನರ್, ಕಾಕತಿವೇಸ್, ಶನಿವಾರ ಖುಟ್, ಗಣಪತ ಗಲ್ಲಿ, ನರಗುಂದಕರ ಭಾವೆ ಚೌಕ, ಮಾರುತಿ ಗಲ್ಲಿ, ಹುತಾತ್ಮಾ ಚೌಕ, ಕಿರ್ಲೋಸ್ಕರ್ ರೋಡ್, ಧರ್ಮವೀರ ಛತ್ರಪತಿ ಸಂಭಾಜೀ ಚೌಕ್, ಸ್ವಾಮೀ ವಿವೇಕಾನಂದ ಚೌಕ್, ಗೊಂಧಳಿ ಗಲ್ಲಿಯ ಮಾರ್ಗವಾಗಿ ಲಿಂಗರಾಜ್ ಕಾಲೇಜ್ ಮೈದಾನಕ್ಕೆ ತಲುಪಿ ಕೊನೆಗೊಂಡಿತು.

ನಂತರ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಜಿ ಧಾರವಾಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಕಾರಕ ಶ್ರೀ ಸು. ರಾಮಣ್ಣ ಬೌದ್ಧಿಕ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *