Select Page

ಗೋಕಾಕ್ ಪಟ್ಟಣಕ್ಕೆ ಜಲಕಂಟಕ ; ಸಂಕಷ್ಟಕ್ಕೆ ಸಿಲುಕಿದ ಜನ

ಗೋಕಾಕ್ ಪಟ್ಟಣಕ್ಕೆ ಜಲಕಂಟಕ ; ಸಂಕಷ್ಟಕ್ಕೆ ಸಿಲುಕಿದ ಜನ

ಗೋಕಾಕ: ಮಹಾಮಳೆಯಿಂದ ಗೋಕಾಕ ತಾಲೂಕಿನಲ್ಲಿ ಪ್ರವಾಹ ಎದುರಾಗಿದ್ದು ಜನವಸತಿ ಪ್ರದೇಶಕ್ಕೆ ನೀರು ನುಗ್ಗುತ್ತಿದ್ದು ತಾಲೂಕಾಡಳಿತ, ಪೋಲಿಸ್ ಇಲಾಖೆ ಸೇರಿ ಅಧಿಕಾರಿಗಳ ತಂಡ ನದಿ ತಟದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುತ್ತಿದ್ದಾರೆ.

ನಗರದ ದಾಳಂಬ್ರಿ ತೋಟ, ಹಳೆ ದನದ ಪೇಟೆಯ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ರವಾಸಲಾಗಿದ್ದು ಇನ್ನುಳಿದ ಬೋಜಗಾರ ಗಲ್ಲಿ, ಕುಂಬಾರ ಗಲ್ಲಿ, ಮಟನ್ ಮಾರ್ಕೆಟ್ ಸೇರಿದಂತೆ ಜನವಸತಿ ಪ್ರದೇಶಗಳ ಜನರನ್ನು ಅಧಿಕಾರಿಗಳು ಸ್ಥಳಾಂತರಿಸಿ ನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾದ ಕಾಳಜಿ ಕೇಂದ್ರಗಳಿಗೆ ಜನರನ್ನು ಕಳುಹಿಸುತ್ತಿದ್ದಾರೆ.

ತಾಲೂಕಿನ ಕುಂದರಗಿ, ಪಾಶ್ಚಾಪೂರ ಗ್ರಾಮಗಳಲ್ಲಿ ಮಾರ್ಕಂಡೇಯ ನದಿ ಹಾಗೂ ಬಳ್ಳಾರಿ ನಾಲಾ ಹಾಗೂ ಅಡಿಬಟ್ಟಿ, ಚಿಗಡೊಳ್ಳಿ, ಉದಗಟ್ಟಿ, ತಳಕಟ್ನಾಳ ಗ್ರಾಮಗಳಲ್ಲಿ ಘಟಪ್ರಭಾ ನದಿಯ ಹರಿದು ಬಂದಿರುವದರಿಂದ ಜನರು ತಮ್ಮಮ ಸುತ್ತಮುತ್ತಲಿನ ನೆಂಟರ, ಸಂಬAಧಿಕರ ಮನೆಗೆ ಮತ್ತು ಕಾಳಜಿ ಕೇಂದ್ರಕ್ಕೆ ಜನರು ಸಾಗುತ್ತಿದ್ದಾರೆ. ಹಿಡಕಲ್ ಜಲಾಶಯದಿಂದ ಇನ್ನು ಹೆಚ್ಚಿನ ನೀರು ಹರಿಬಿಟ್ಟಲ್ಲಿ ಮೆಳವಂಕಿ, ಹಡಗಿನಾಳ, ಕಲಾರಕೊಪ್ಪ ಗ್ರಾಮಸ್ಥರಿಗೂ ಸಹ ಸ್ಥಳೀಯ ಗ್ರಾಮ ಪಂಚಾಯತಗಳಿAದ ಸುರಕ್ಷಿತ ಸ್ಥಳಕ್ಕೆ ಧಾವಿಸುವಂತೆ ಸಾರಲಾಗುತ್ತಿದೆ.

ಗೋಕಾಕ ತಾಲೂಕಿನಲ್ಲಿ ಈಗಾಗಲೇ ಹಲವು ಸೇತುವೆಗಳು ಮುಳುಗಡೆಯಾಗಿದ್ದು ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ ಸಂಕೇಶ್ವರ-ಗೋಕಾಕ ಸಂಪರ್ಕ ಕಲ್ಪಿಸುವ ಲೋಳಸೂರ ಸೇತುವೆ ಮೇಲೆ ಘಟಪ್ರಭಾ ನದಿಯ ನೀರು ಹರಿಯುತ್ತಿರುವದರಿಂದ ರಸ್ತೆ ಸಂಪರ್ಕವನ್ನು ಸ್ಥಗೀತಗೊಳಿಸಿರುವ ಪೋಲಿಸ್ ಇಲಾಖೆ ಬ್ಯಾರಿಕೇಡ್ ಹಾಕುವ ಮೂಲಕ ವಾಹನಗಳನ್ನು ತಡೆಯುತ್ತಿದ್ದಾರೆ. ಮಳೆಪ್ರಮಾಣ ಹೆಚ್ಚಾದಲ್ಲಿ ಗೋಕಾಕ-ಕೊಣ್ಣೂರ ಸಂಪರ್ಕ ಕಲ್ಪಿಸುವ ಚಿಕ್ಕಹೊಳಿ ಸೇತುವೆಯು ಸಹ ಮುಳಗಡೆಯಾಗಲಿದೆ.

ಈಗಾಗಲೇ ಹಿಡಕಲ್ ಜಲಾಶಯದಿಂದ ೪೦ಸಾವಿರ, ಹಿರಣ್ಯಕೇಶಿ ನದಿಯಿಂದ ೨೩ಸಾವಿರ, ಮಾರ್ಕಂಡೇಯ ನದಿ ಮತ್ತು ಬಳ್ಳಾರಿ ನಾಲಾ ಸೇರಿ ೧೦ಸಾವಿರ ಕ್ಯೂಸೇಕ್ಸ್ ಸೇರಿ ಒಟ್ಟು ೭೩ಸಾವಿರ ಕ್ಯೂಸೇಕ್ಸ್ ನೀರು ಘಟಪ್ರಭಾ ನದಿಗೆ ಹರಿದು ಬರುತ್ತಿದ್ದು, ನದಿ ಪಾತ್ರದ ಜನರು ಪ್ರವಾಹದಿಂದ ಮತ್ತೊಮ್ಮೆ ಸಂಕಟ ಅನುಭವಿಸುವಂತಾಗಿದೆ.

ಸ್ಥಳೀಯ ಸಂಘ ಸಂಸ್ಥೆಗಳಿಂದ ಜಾಗೃತಿ: ಘಟಪ್ರಭಾ ನದಿ ತಟದಲ್ಲಿರುವ ಜನವಸತಿ ಪ್ರದೇಶಗಳಲ್ಲಿಯ ಜನರಿಗೆ ಸ್ಥಳೀಯ ಸಂಘ ಸಂಸ್ಥೆಯವರು ಮನೆಗಳನ್ನು ಖಾಲಿ ಮಾಡಲು ಸಹಾಯ ಮಾಡುತ್ತಿದ್ದು ಜನರ ಬಟ್ಟೆ ಬರೆ, ಉಪಯುಕ್ತ ಸಾಮಾನುಗಳು ಸೇರಿ ಎಲ್ಲವನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲು ಸಹಕರಿಸುತ್ತಿದ್ದಾರೆ. ಜನರು ಕಾಳಜಿ ಕೇಂದ್ರಗಳಿಗೆ ತೆರಳಲು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!