
ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳ ; ಆತಂಕದಲ್ಲಿ ಜನ

ಬೆಳಗಾವಿ : ನಿರಂತರ ಮಳೆ ಮುಂದುವರಿದ ಪರಿಣಾಮ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ಜನ ಆತಂಕಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶುಕ್ರವಾರ ಸಂಜೆಯಿಂದ ನದಿ ನಿರೀನ ಮಟ್ಟದಲ್ಲಿ ವಿಪರೀತ ಏರಿಕೆ ಕಂಡುಬಂದಿದ್ದು ನದಿ ಪಾತ್ರದ ಅನೇಕ ಹಳ್ಳಿಗಳು ಮುಳುಗಡೆ ಭೀತಿಯಲ್ಲಿವೆ.
ಅಥಣಿಯಿಂದ ಗೋಕಾಕ್ ಸಂಪರ್ಕಿಸುವ ದರೂರ ಸೇತುವೆಯ ಕೆಳಭಾಗಕ್ಕೆ ನೀರು ತಲುಪಿದ್ದು ಇದರಿಂದ ಹಿಂದಿನ ಹಳ್ಳಿಗಳಿಗೆ ಮತ್ತಷ್ಟು ಪ್ರವಾಹವನ್ನು ಉಂಟುಮಾಡುತ್ತದೆ.