ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕುವುದೇ ನಿಜವಾದ ಸಾಧನೆ : ಸಂತೋಷ ಅರಭಾವಿ
ಚಿಕ್ಕೋಡಿ : ಬದುಕಿನ ಮೌಲ್ಯಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಂಡು ಹೋಗುವುದೇ ನಿಜವಾದ ಸಾಧನೆ.
ಒಬ್ಬ ವ್ಯಕ್ತಿ ಸಾಧನೆ ಮಾಡಿದಾಗ ತಂದೆ,ತಾಯಿಗಳು ಸಂತೋಷ ಹೊಂದಿದಷ್ಟು ಕಲಿಸಿದ ಗುರುಗಳು ಹೆಮ್ಮೆ ಆಡುತ್ತಾರೆ ಎಂದು, ಉತ್ತರ ಕರ್ನಾಟಕ ಮಾನವ ಹಕ್ಕುಗಳ ಕಾರ್ಯಾಧ್ಯಕ್ಷ ಸಂತೋಷ ಅರಭಾವಿ ಹೇಳಿದರು.
ಚಿಕ್ಕೋಡಿ ತಾಲೂಕಿನ ನಿಡಸೋಸಿ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡು ಸಮಾರಂಭದಲ್ಲಿ ಮಾತನಾಡಿದ ಇವರು. ವಿದ್ಯಾರ್ಥಿ ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿರಬೇಕು. ಅದಕ್ಕೆ ತಕ್ಕಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಮಾತ್ರ ಯಶಸ್ಸು ಲಭಿಸುತ್ತದೆ. ಭಾರತದ ಭವಿಷ್ಯ ಎಂದೇ ಹೇಳುವ ಇಂದಿನ ಯುವಕರು ನಮ್ಮ ದೇಶದ ನಿಜವಾದ ಆಸ್ತಿ ಎಂದರು.
ಪ್ರಸ್ತುತ ಸಾಲಿನ ವರದಿವಾಚನ ಪ್ರಾಚಾರ್ಯ ಪಿ ಎಮ್ ಕಂಬಾರ. 60 ವರ್ಷಗಳಿಂದ ಸಂಸ್ಥೆಯ ಏಳ್ಗೆಗಾಗಿ ಸಂಸ್ಥೆಯ ಅಧ್ಯಕ್ಷರು ಹಾಗೂ ಮಾರ್ಗದರ್ಶಕರಾದ ಪರಮ ಪೂಜ್ಯ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಜೀ ಹಾಗೂ ಆಡಳಿತ ಮಂಡಳಿಯ ಪರಿಶ್ರಮದ ಬಗ್ಗೆ ಮೆಲಕು ಹಾಕಿದರು. ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಸಂಸ್ಥೆಯ ವತಿಯಿಂದ ಸತ್ಕರಿಸಲಾಯಿತು. ವಿಜ್ಞಾನ ವಿಭಾಗದಲ್ಲಿ ವರ್ಷದ ಆದರ್ಶ ವಿದ್ಯಾರ್ಥಿಯಾಗಿ ರಾಹುಲ್ ಬಿ ಬಡಿಗೇರ, ವರ್ಷದ ವಿದ್ಯಾರ್ಥಿನಿಯಾಗಿ ಸಂಜನಾ ಪಾಟೀಲ್, ವಾಣಿಜ್ಯ ವಿಭಾಗದಲ್ಲಿ ಆದರ್ಶ ವಿದ್ಯಾರ್ಥಿಯಾಗಿ ಪ್ರಥಮ ಗಣಾಚಾರಿ ಹಾಗೂ ಆದರ್ಶ ವಿದ್ಯಾರ್ಥಿನಿಯಾಗಿ ಮೋನಿಕಾಜಿ ಪ್ರಶಸ್ತಿಗೆ ಬಾಜನರಾದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಆರ್ ಎಸ್ ಪಾಟೀಲ, ಸಾವಂತ ಮಿರ್ಜೆ, ಎಸ್ ಎಮ್ ಪದ್ಮಣ್ಣವರ, ಎಸ್ ಎಮ್ ಭಂಗಿ, ಎಸ್ ಜೆ ಮಗದುಮ್, ಕರುಣಾ ಸುಫಲಿ, ಉಜ್ವಲಾ ಸೂರ್ಯವಂಶಿ, ಎಸ್ ಎಸ್ ಹಿರೇಮಠ, ಸಾಗರ ಕಂಬಾರ, ಸವಿತಾ ಇಂಗಳೆ, ಸಂದ್ಯಾ ಬಿ ಜೆ, ಅಮೃತಾ ಭೋಗಿ, ಎಸ್ ಎಮ್ ಕಲಮಟಗಿ, ಎಂ ಎಂ ಕುರಬರ, ರಾಜೇಶ್ವರಿ, ಗುರು ಹಿರೇಮಠ, ಪ್ರಿಯಾಂಕಾ ಸೊಲ್ಲಾಪುರೆ, ಶಿವಯೋಗಿ ಹಿರೇಮಠ ಹಾಗೂ ಎಲ್ಲ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಚೈತ್ರಾಲಿ ಕಾಡಗಿ ಹಾಗೂ ರೂಪಶ್ರೀ ಪಾಟೀಲ್ ನಿರೂಪಿಸಿದರು. ಪ್ರಿಯಾಂಕಾ ಸೊಲ್ಲಾಪುರೆ ವಂದಿಸಿದರು.