Select Page

ಜಂಗಮರ ಮಕ್ಕಳ ಹಕ್ಕು ಕಿತ್ತುಕೊಳ್ಳುತ್ತಿದ್ದಾರಾ ಶಾಸಕ ಪಿ. ರಾಜೀವ್…?

ಜಂಗಮರ ಮಕ್ಕಳ ಹಕ್ಕು ಕಿತ್ತುಕೊಳ್ಳುತ್ತಿದ್ದಾರಾ ಶಾಸಕ ಪಿ. ರಾಜೀವ್…?

ಬೆಳಗಾವಿ : ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ತೀರ್ಪಿನ ಅನ್ವಯ ಬೇಡ ಜಂಗಮ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕು ಎಂಬ ಆದೇಶವಿದ್ದರೂ, ಪದೇ ಪದೇ ವಿಧಾನಸಭೆ ಕಲಾಪದಲ್ಲಿ ವಿರೋಧಿಸುವ ಮೂಲಕ‌ ಜಂ‌ಗಮ ಮಕ್ಕಳ ಹಕ್ಕು ಕಿತ್ತುಕೊಲ್ಳುವ ಕೆಲಸವನ್ನು ಶಾಸಕ ಪಿ. ರಾಜೀವ್ ಮಾಡುತ್ತಿದ್ದಾರೆ ಎಂಬ ಆರೋಪ ಸಧ್ಯ ಕೇಳಿಬರುತ್ತಿದೆ.

ಅಯ್ಯಾಚಾರ ದೀಕ್ಷೆ ಪಡೆದು ಪೂಜೆ ಮಾಡುತ್ತಾ ಭಕ್ತರು ನೀಡಿದ ಭಿಕ್ಷೆಯಲ್ಲಿ ಬದುಕು ಸಾಗಿಸುತ್ತಿರುವ ಬಡ ಬೇಡ ಜಂಗಮ ಸಮುದಾಯಕ್ಕೆ, ಸಂವಿಧಾನಾತ್ಮಕವಾಗಿ ನೀಡಿರುವ ಪರಿಶಿಷ್ಟ ಜಾತಿ ಪ್ರಮಾಣಪತ್ರಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ, ಶಾಸಕ ಪಿ. ರಾಜೀವ್ ದ್ರೋಹ ಮಾಡುತ್ತಿದ್ದಾರೆ ಎಂಬ ಆರೋಪವನ್ನು ಜನ ಮಾಡುತ್ತಿದ್ದಾರೆ.  ಅಷ್ಟೇ ಅಲ್ಲದೆ ಬಡ ಬೇಡ ಜಂಗಮ ಮಕ್ಕಳು ಸರ್ಕಾರದ ಸವಲತ್ತುಗಳನ್ನು ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದರೆ ಶಾಸಕರಿಗೆ ಏನು ತೊಂದರೆ ಎಂಬ ಪ್ರಶ್ನೆ ಸಾಮಾನ್ಯರಲ್ಲಿ ಮೂಡಿದೆ.

ಹೌದು ಭಾರತದ ಸುಪ್ರೀಂಕೋರ್ಟ್ ಪ್ರಕರಣ ಸಂಖ್ಯೆ AIR –
1993 SC 483 ರಲ್ಲಿ ತೀರ್ಪು ನೀಡಿದ್ದು. “That the usage of the term Community is wider and bigger than the caste ” ಎಂದು ಖಚಿತ ಪಡಿಸಿದೆ. ಕೇಂದ್ರ ಸರ್ಕಾರ  ಲಿಂಗಾಯತ ಮತ್ತು ವೀರಶೈವ
ಜಾತಿಯಲ್ಲ ಎಂದು ಸ್ಪಷ್ಟಪಡಿಸಿದೆ. “GOVERNMENT
OF INDIA, MINISTRY OF HOME AFFAIRS
NEW DELHI ”

ಬೇಡ ಜಂಗಮ ಪರಿಶಿಷ್ಟ ಜಾತಿ ಪತ್ರ ನೀಡುವ ಸಂಬಂಧದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ಆದೇಶಗಳನ್ನು, ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಉಲ್ಲಂಘನೆ ಮಾಡುತ್ತಿರುವ ರಾಜ್ಯದ ತಹಶೀಲ್ದಾರರುಗಳು ತಪ್ಪು ಮಾಹಿತಿಯನ್ನು ರವಾನಿಸುತ್ತಿದ್ದಾರೆ. ತಪ್ಪು ಮಾಹಿತಿಯನ್ನು
ನೀಡುತ್ತಿರುವುದು 1995ರ ಅಧಿನಿಯಮ ದೌರ್ಜನ್ಯ
ಪ್ರತಿಬಂಧ ಕಾಯ್ದೆ ಪ್ರಕಾರ ಅಪರಾಧವಾಗುತ್ತದೆ ಎಂದು  ಸರ್ಕಾರವೇ ಸ್ಪಷ್ಟಪಡಿಸಿದೆ.

ಹಿಂದೂ ಲಿಂಗವಂತ ಎನ್ನುವುದು ಜಾತಿಯಲ್ಲ.  ವೀರಶೈವ ಲಿಂಗಾಯತವು ಮತ ಅಥವಾ ಪಂಥವಾಗಿದ್ದು, (Sect/Cult) ಅದು ಜಾತಿಯಾಗಲಾರದು ಎಂದು ನ್ಯಾಯಾಲಯದ ಹಲವು ತೀರ್ಪಗಳು ಪ್ರಕಟಿಸಿವೆ. (Somashekhar Veerappa B. Murgod Vs. The State of Karnataka and another, WP 8873/1979 Dt.11-10-1979) ಎಂದು ತೀರ್ಪು ನೀಡಿದೆ.

ಭಾರತ ಸಂವಿಧಾನದ Article 341 ದಲ್ಲಿ Depressed
Class ದ ಪ್ರಸ್ತಾಪವಿದ್ದು, ಅದುವೇ ಈಗಿನ ಪರಿಶಿಷ್ಟ
ಜಾತಿ ಪಟ್ಟಿಯಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಆ
ಪಟ್ಟಿಯಲ್ಲಿ ‘ಜಂಗಮ’ ಜಾತಿಯು ಇರುತ್ತದೆ. ಸ್ವತಂತ್ರ
ಪೂರ್ವ 1936 ರ ಪರಿಶಿಷ್ಟ ಜಾತಿ ಪಟ್ಟಿಯಲ್ಲೂ ಜಂಗಮ
ಜಾತಿಯು ಸೇರಿಸಲ್ಪಟ್ಟಿರುತ್ತದೆ.ಇದೇ ಕಾರಣದಿಂದ
ಜಂಗಮ ಜಾತಿಯನ್ನು ಕರ್ನಾಟಕ ಸರ್ಕಾರವು
ಯಾವುದೇ ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿ
ಸೇರಿಸಲು ಸಾಧ್ಯವಾಗಿರುವುದಿಲ್ಲ ಎಂಬುದನ್ನು
ಗಮನಿಸಲೇಬೇಕಾಗುತ್ತದೆ. ವೀರಶೈವ ಜಂಗಮರೇ ಬೇಡಜಂಗಮರೆಂದು ಗೀತಾ ಕುಲಕರ್ಣಿ ಪ್ರಕರಣದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ಪ್ರಕಟಿಸಿದೆ.

“ರಿಟ್ ಪಿಟಿಷನ್ ಸಂಖ್ಯೆ 1897 /1989”

ಸೂರ್ಯನಾಥ ಕಾಮತ್ ರವರ ಪತ್ರ ಸಂ. 148289-90
ದಿ.28-8-1989 ರ ಗೆಜೆಟಿಯರ್ ವರದಿಯಲ್ಲಿ
ಮಾಮೂಲಿ ಜಂಗಮರೇ ಬೇಡಜಂಗಮರೆಂದು
ವರದಿಸಲಾಗಿದೆ. ಇದು ಕರ್ನಾಟಕ ಸರ್ಕಾರದ ಅಧಿಕೃತ
ಅಧ್ಯಯನ ವರದಿಯಾಗಿದೆ. ಇದೇ ವರದಿಯನ್ವಯ
ಬೇಡಜಂಗಮ ಪರಿಶಿಷ್ಟ ಜಾತಿ ಪ್ರಮಾಣ ಪತ್ರ
ವಿತರಿಸಲು ಸರ್ಕಾರದ ಸುತ್ತೋಲೆಗಳಲ್ಲಿ ಸ್ಪಷ್ಟಿಕರಿಸಲಾಗಿದೆ.
(ಸ.ಕ.ನಿ/ಉ ಮತ್ತು ತ-2/ಸಿಆರ್ 39/07-08 ದಿ. 22-
02-2011) ಸಮಾಜ ಕಲ್ಯಾಣ ಇಲಾಖೆಯ ಪ್ರ. ಕಾರ್ಯದರ್ಶಿಗಳು ಈ ವಿಷಯದಲ್ಲಿ ಹೆಚ್ಚಿನ ಸ್ಪಷ್ಟಿಕರಣದ ಅವಶ್ಯಕತೆ ಇರುವುದಿಲ್ಲ ಎಂದು ಅಂತಿಮ ಸೂಚನೆಯನ್ನು ತಮ್ಮ ಸುತ್ತೋಲೆಯಲ್ಲಿ ವಿಶಾದವಾಗಿ ತಿಳಿಸಿರುತ್ತಾರೆ. (ಸ.ಕ.ಇ. 40 ಎಸ್.ಎ.ಡಿ. 2010 ದಿ.23-08-2011) ಶಾಲಾ ದಾಖಲಾತಿ, ಜಾತಿ ನಿರ್ಧರಿಸಲು ಕಡ್ಡಾಯ ದಾಖಲೆಯಲ್ಲ ಎಂದು ಉನ್ನತ ನ್ಯಾಯಾಲಯಗಳ ಮತ್ತು ಸರ್ಕಾರದ ಸುತ್ತೋಲೆಯನ್ನು ಪರಿಗಣಿಸಬೇಕಾಗುತ್ತದೆ.

ಸ್ಥಾನಿಕ ಅವಶ್ಯಕ ಪರಾಮರ್ಶೆಯಿಂದ ಜಾತಿಯನ್ನು ನಿರ್ಧರಿಸಬೇಕಾಗುತ್ತದೆ. ನನ್ನ ಜಾತಿ ಕುರಿತು, ಈಗಾಗಲೇ ಸ್ಥಾನಿಕ ಪಂಚನಾಮೆ ಆಗಿದೆ. ಜಾತಿ ಬೇಡ ಜಂಗಮ
ಎಂದೂ ದೃಡೀಕೃತವಾಗಿದೆ. (ಕರ್ನಾಟಕ ಸರ್ಕಾರದ ಸಚಿವಾಲಯ ಸುತ್ತೋಲೆ ಸಂ. SWL 144 SAD 90 ದಿ. 26-3-1991) ಸಲ್ಲಿಸಿದ ಪ್ರತಿಯೊಂದು ದಾಖಲೆಗಳನ್ನು ಪರಿಗಣಿಸಿ, ಪರಿಶೀಲಿಸಿ ಸೂಕ್ತ ಕಾನೂನಾತ್ಮಕ ಟಿಪ್ಪಣಿ,
ಶರಾದೊಂದಿಗೆ ತೀರ್ಮಾನಿಸತಕ್ಕದ್ದೆಂದು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಪ್ರಕರಣದಲ್ಲಿ ನಿರ್ದೇಶಿಸಲಾಗಿದೆ. (AIR 1996 SC 1338 Gayatrilaxmi Baburao Nagapure Vs. StMaharashtra).

ಈಗಾಗಲೇ ರಾಜ್ಯಾದ್ಯಂತ ಹಲವಾರು ತಾಲೂಕಿನಲ್ಲಿ
ಬೇಡಜಂಗಮ ಜಾತಿ ಪ್ರ. ಪತ್ರಗಳು ವಿತರಣೆಯಾಗಿದ್ದು,
ಹಲವಾರು ಜನ ಸರ್ಕಾರದ ವಿವಿಧ ಸವಲತ್ತುಗಳನ್ನು,
ಸರ್ಕಾರಿ ಸೇವೆಯನ್ನು ಮಾಡಿ, ನಿವೃತ್ತಿ ಮತ್ತು ನಿವೃತ್ತಿ
ಅಂಚಿನಲ್ಲಿದ್ದಾರೆ. ಅವರೆಲ್ಲ ಸಂವಿಧಾನ ಬದ್ಧವಾಗಿ
ಸವಲತ್ತು ಪಡೆದಿರುವುದರಿಂದಲೇ ಸರ್ಕಾರ
ಒಪ್ಪಿಕೊಂಡಿದೆ. ಹಲವು ದಶಕಗಳು ಕಳೆದರೂ,
ಎಲ್ಲಿಯೂ ಅವರು ಬೇಡಜಂಗಮರಲ್ಲವೆಂದು ಮೇಲ್ಕಂಡ
ಸಂವಿಧಾನಾತ್ಮಕ ದಾಖಲೆಗಳನುಸಾರ ನಿರೂಪಿಸಲು
ಯಾರಿಗೂ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ
ಸಮರ್ಥಕವಾಗಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ
ಪ್ರಕಟಿತ ತೀರ್ಪು ( Nagappa Vs State of Karnataka, WA1856 of 1986 Dtd. 1st August 1986 ರಲ್ಲಿ” Authorities to follow and extend benefits thereof to all similar cases – Not necessary for every person to seek similar relief granted already” ಎಂದು ಸ್ಪಷ್ಟಿಕರಿಸಿದೆ.

ನ್ಯಾಯಾಲಯಗಳ ತೀರ್ಪುಗಳನ್ನು ಮತ್ತು ಸರ್ಕಾರದ
ಸ್ಪಷ್ಟ ಆದೇಶಗಳನ್ನು ಸಹಾ ರಾಜಕೀಯ ವ್ಯಕ್ತಿಗಳ
ಹಿತಾಸಕ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ
ಭವಿಷ್ಯದಲ್ಲಿ ಇದರ ಪರಿಣಾಮ ಅಧಿಕಾರಿಗಳ
ಮೇಲೆಯೇ ಕಾನೂನಾತ್ಮಕ ಪರಿಣಾಮ ಬೀರುವುದು
ಖಚಿತ ಎಂದು ಜೆ.ಎಮ್.ರಾಜಶೇಖರ ಬೇಡ ಜಂಗಮ
ಜಾತಿ ಪ್ರಮಾಣ ಪತ್ರ ನೀಡದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಸುಪ್ರೀಂ ಕೋರ್ಟ್ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಸೂಚಿಸಿದೆ. ಆದರೆ ಶಾಸಕ ಪಿ. ರಾಜೀವ್ ಸೇರಿದಂತೆ ಕರ್ನಾಟಕ ಕೆಲವು ಶಾಸಕರು ವಿರೋಧ ಮಾಡುತ್ತಿದ್ದು ರಾಜ್ಯದ ಸಣ್ಣ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯವಾಗಿದೆ. ಇನ್ನೂ ಮುಂದೆಯಾದರೂ ಸಮುದಾಯದ ಬೆಳವಣಿಗೆ ಸಹಕರಿಸಲಿ ಎಂಬುದು ಎಲ್ಲರ ಆಶಯ.

Advertisement

Leave a reply

Your email address will not be published. Required fields are marked *

error: Content is protected !!