Select Page

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಗೆ 130 ವಸಂತಗಳ ಸಂಭ್ರಮ

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಗೆ 130 ವಸಂತಗಳ ಸಂಭ್ರಮ

ವಿವೇಕಾನಂದರು ಬಳಸಿದ್ದ ವಸ್ತುಗಳು ಈಗಲೂ ಸುರಕ್ಷಿತ

ಬೆಳಗಾವಿ : ರಾಷ್ಟ್ರಸಂತ ಸ್ವಾಮೀ ವಿವೇಕಾನಂದರು ಕರ್ನಾಟಕದ ಕೆಲವು ಸ್ಥಳಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಗಡಿ ಜಿಲ್ಲೆ ಬೆಳಗಾವಿಗೆ ಭೇಟಿ ನಿಡಿದ್ದ ಆ ಮಹತ್ವದ ಘಳಿಗೆಗೆ ಸಧ್ಯ 130 ವಸಂತಗಳ ಸಂಭ್ರಮ. ತಮ್ಮ ಜ್ಞಾನದ ಬಲದಿಂದ ಭಾರತವಲ್ಲದೇ ಪಾಶ್ಚಿಮಾತ್ಯರ ಅಂಧಕಾರ ಓಡಿಸಿ ಯುವ ಶಕ್ತಿಯ ಮಹತ್ವ ಸಾರಿದ್ದ ಸ್ವಾಮಿ ವಿವೇಕಾನಂದರು, ಅಂದು ಬೆಳಗಾವಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಳಿದುಕೊಂಡಿದ್ದ ಮನೆ ಈಗಲೂ ಇದೆ.

ಸ್ವಾಮಿ ವಿವೇಕಾನಂದ ಈ ಹೆಸರು ಆಧ್ಯಾತ್ಮಿಕ ಪರಂಪರೆಯಲ್ಲಿ ಅಚ್ಚಳಿಯದೆ ಉಳಿದಿದೆ. ಇವರು ಭಾರತ ದರ್ಶನ ಮಾಡುವ ಸಂದರ್ಭದಲ್ಲಿ ಕರ್ನಾಟಕದ ಬೆಂಗಳೂರು ಹಾಗೂ ಮೈಸೂರು ಸೇರಿದಂತೆ ಬೆಳಗಾವಿ ನಗರಕ್ಕೂ ಭೇಟಿ ನೀಡಿದ್ದರು. ತಮ್ಮ ಅದ್ಬುತ ಜ್ಞಾನದಿಂದ ಇಡೀ ಜಗತ್ತನ್ನು ಭಾರತೀಯ ಸಂಸ್ಕೃತಿಯತ್ತ ತಿರುಗಿ ನೋಡುವಂತೆ ಮಾಡಿದ್ದ ಸ್ವಾಮೀ ವಿವೇಕಾನಂದರು ಸರಿ ಸುಮಾರು 130 ವರ್ಷಗಳ ಹಿಂದೆ ಈ ದಿನದಂದು ಬೆಳಗಾವಿ ಮಣ್ಣಿಗೆ ಪಾದ ಸ್ಪರ್ಶಿಸಿದ್ದರು.

ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸುವ ಒಂದು ವರ್ಷದ ಹಿಂದೆ, 1892 ರ ಅಕ್ಟೋಬರ್ 16 ರಿಂದ 27 ರವರೆಗೆ ಒಟ್ಟು 11 ದಿನ ಸ್ವಾಮಿ ವಿವೇಕಾನಂದರು ಬೆಳಗಾವಿಯಲ್ಲಿ ತಂಗಿದ್ದರು. ನಗರದ ರಿಸಾಲ್ದಾರ್ ಗಲ್ಲಿಯಲ್ಲಿರುವ ಸದಾಶಿವ ಭಾಟೆ ಅವರ ಮನೆಯಲ್ಲಿ ಸ್ವಾಮೀಜಿ 3 ದಿನ ತಂಗಿದ್ದರೆ. ನಂತರ, ಅಂದಿನ  
ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹರಿಪದಮಿತ್ರರ ಮನೆಗೂ ಸ್ವಾಮಿ ವಿವೇಕಾನಂದರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ಸಾವಿರಾರು ಭಕ್ತರಿಗೆ ದರ್ಶನ ನೀಡಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಇನ್ನೂ ಸರ್ಕಾರಿ ಅಧಿಕಾರಿಯಾಗಿದ್ದ ಹರಿದಮಿತ್ರರ ಜೊತೆಗಿನ ಸಂಭಾಷಣೆ ಸ್ವಾಮಿ ವಿವೇಕಾನಂದರ ಮೇರು ವ್ಯಕ್ತಿತ್ವದ ದರ್ಶನ ಮಾಡಿಸಿದೆ.

ಸ್ವಾಮೀಜಿ ತಂಗಿದ್ದ ಮನೆ ಈಗಲೂ ಸುಸಜ್ಜಿತ : ಬೆಳಗಾವಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ಅಂದಿದ ಸದಾಶಿನ ಭಾಟೆ ಅವರ ಮನೆಯಲ್ಲಿ ಮೂರು ದಿನಗಳವರೆಗೆ ತಂಗಿದ್ದರು. ಈ ಸಂದರ್ಭದಲ್ಲಿ ಸ್ವಾಮೀಜಿ ಬಳಸಿದ್ದ ವಸ್ತುಗಳನ್ನು ಈಗಲೂ ಸಂರಕ್ಷಿಸಿ ಇಡಲಾಗಿದೆ. ವಿವೇಕಾನಂದ ಸ್ಮಾರಕವನ್ನಾಗಿ ಪರಿವರ್ತನೆ ಮಾಡಲಾಗಿದ್ದು ಇವರು ಬಳಸಿದ್ದ ಮಂಚ, ಕನ್ನಡಿ, ಲಾಠಿಯನ್ನೂ ಸಂರಕ್ಷಿಸಲಾಗಿದೆ. ಸ್ವಾಮೀಜಿಯವರ ಜೀವನಾಧಾರಿತ ಚಿತ್ರ ಪ್ರದರ್ಶನವನ್ನು ಸಹ ಭಕ್ತರು ಭೇಟಿಯ ವೇಳೆ ವೀಕ್ಷಿಸಬಹುದಾಗಿದೆ. ಒಟ್ಟಿನಲ್ಲಿ ಕರುನಾಡಿಗೆ ಭೇಟಿ ನೀಡಿ ಈ ಮಣ್ಣು ಪಾವನಗೊಳಿಸಿದ ವೀರ ಸನ್ಯಾಸಿಯ ಸವಿ ಗಳಿಗೆಯನ್ನು ಈ ನಾಡು ಸಂಭ್ರಮಿಸುತ್ತಿರುವುದು ವಿಶೇಷ.

*************

ಕೋಟ್ :::::::

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಗೆ ಸಧ್ಯ 130 ವರ್ಷಗಳ ಸಂಭ್ರಮ. ಈ ಸಂದರ್ಭದಲ್ಲಿ ಅವರು ತಂಗಿದ್ದ ಮನೆ ಹಾಗೂ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ವಾಮೀಜಿ ಪಾದ ಸ್ಪರ್ಶದಿಂದ ಪಾವನಗೊಂಡ ಈ ಮಣ್ಣಿನಲ್ಲಿ ನಾವೆಲ್ಲಾ ಬದುಕು ಕಟ್ಟಿಕೊಂಡಿದ್ದು ಪುಣ್ಯ. 

ಸ್ವಾಮಿ ಆತ್ಮ ಪ್ರಾಣಾನಂದ ಮಹಾರಾಜ್
– ಬೆಳಗಾವಿ ರಾಮಕೃಷ್ಣ ಮಿಶನ್ ಕಾರ್ಯದರ್ಶಿ

*************

Advertisement

Leave a reply

Your email address will not be published. Required fields are marked *