
ಮೋದಿ ಆಡಳಿತದಲ್ಲಿ ಸಾಯುತ್ತಿರುವವರು ಯಾರು…?

ನರೇಂದ್ರ ಮೋದಿ ಈ ಒಂದು ಹೆಸರು ಕಳೆದ ಎಂಟು ವರ್ಷಗಳಿಂದ ಈ ದೇಶದಲ್ಲಿ ಚಾಲ್ತಿಯಲ್ಲಿರದೆ. ಒಬ್ಬ ಚಹಾ ಮಾರುವ ಬಾಲಕ ಈ ದೇಶದ ಪ್ರಧಾನಿಯಾದ ಕಥೆ ಕೇಳುತ್ತಾ, ಕೇಳುತ್ತಾ, ಅದೆಷ್ಟೋ ಯುವಸಮೂಹ ಆಕರ್ಷನೆಯಾದ ಕಾಲಘಟ್ಟ. ಆದರೆ ಸಧ್ಯದ ಪರಿಸ್ಥಿತಿ ನೋಡಿದರೆ ಬಡಜನರ ಬದುಕು ಬೆಲೆ ಏರಿಕೆ ಎಂಬ ಇಕ್ಕಟ್ಟಿಗೆ ಸಿಲುಕಿ ನರಳುತ್ತಿರುವ ಬಗ್ಗೆಯೂ ಒಂದು ಪ್ರಶ್ನೆ ಮೂಡುವುದಂತು ಸತ್ಯ.
ಅದು 2013 ರ ಕಾಲಘಟ್ಟ. ಇಡೀ ದೇಶವೇ ಮೋದಿಮಯವಾಗಿತ್ತು. ಎಲ್ಲಿ ನೋಡಿದರು ಗುಜರಾತ್ ಮಾದರಿ ಎಂಬ ಕಲ್ಪನೆ ಸಾಮಾನ್ಯರಲ್ಲಿ ಕನಸಿನ ಗೋಪುರ ಕಟ್ಟಿ ಕಳಸ ಇಡುವ ಮಟ್ಟಿಗೆ ನೆಲೆಯೂರಿತ್ತು. ಕಾಲ ಕಳೆದಂತೆ ಸಂಕಷ್ಟಕ್ಕೆ ಸಿಲುಕಿದವರು, ಬದುಕು ಕಟ್ಟಿಕೊಳ್ಳುವ ಅವಸರದಲ್ಲಿ ಮೈ ಮರೆತು ಬೆಲೆ ಏರಿಕೆ ಎಂಬ ಮಾಯಾ ಜಾಲದಲ್ಲಿ ಸಿಲುಕು ನರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಆಡಳಿತದಿಂದ ನಿಜವಾಗಿ ಈ ದೇಶದಲ್ಲಿ ಸಾಯುತ್ತಿರುವವರು ಯಾರು ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಪರಿಹಾರ ಏನು ಎಂಬ ಸಂಕಟವೂ ತಳವೂರಿದೆ.
ಹೌದು ಅಡುಗೆ ಎಣ್ಣೆ, ಸಿಲಿಂಡರ್ ಗ್ಯಾಸ್ ಬೆಲೆ, ಪೆಟ್ರೋಲಿಯಂ ವಸ್ತುಗಳ ಬೆಲೆ ಹಾಗೂ ಜಿ ಎಸ್ ಟಿ ಎಂಬ ತಂತ್ರಗಳ ಮಧ್ಯೆ ಸಾಮಾನ್ಯ ಜನ ಬದುಕು ಸಾಗಿಸಬೇಕಾಗಿದೆ. ಬೆಲೆ ಏರಿಕೆ ಪ್ರಶ್ನೆ ಮಾಡಿದರೆ ದೇಶದ್ರೋಹದ ಪಟ್ಟದ ಜೊತೆಗೆ ಕೆಟ್ಟವ ಎಂಬ ಬಿರುದು ಕೂಡಾ ಇಲ್ಲಿ ಪುಕ್ಕಟೆಯಾಗಿ ದೊರೆಯುತ್ತದೆ. ಇವೆಲ್ಲದರ ಮಧ್ಯೆ ಮೂಡುವ ಪ್ರಶ್ನೆ ಮುಂದಿನ ದಾರಿ ಯಾವುದು…?
ಕೊರೊನಾ ಹೊಡೆತದಿಂದ ಸರ್ಕಾರಗಳ ಬೊಕ್ಕಸಕ್ಕೆ ಬರಗಾಲ ಆವರಿಸಿದಂತು ಸತ್ಯ. ಆದರೆ ಈ ಕಷ್ಟಕಾಲದಲ್ಲಿ ಬದುಕು ನಡೆಸುವ ಅನಿವಾರ್ಯತೆ ಕೂಡಾ ಜನರಲ್ಲಿದ್ದು ಪ್ರಶ್ನೆ ಮಾಡುವ ಹಕ್ಕನ್ನು ಪದೇ ಪದೇ ಪ್ರಶ್ನಿಸುವ ಗೋಜಿಗೆ ಜನಸಾಮಾನ್ಯರು ಹೋಗುತ್ತಿದ್ದಾರೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾದ ಜನ ಎತ್ತ ಸಾಗುತ್ತಿದೆ ನಮ್ಮ ಬದುಕು ಎಂಬ ಪ್ರಶ್ನೆಯಲ್ಲಿಯೂ ಮುಳಿಗಿದ್ದಾರೆ ಎಂದು ಹೇಳಬಹುದು.
ಮೋದಿ ಆಡಳಿತದ ಮೇಲೆ ನಿರೀಕ್ಷೆಯ ಭಾರ ಹೊಂದಿರುವ ಜನರಿಗೆ ಬೆಲೆ ಏರಿಕೆ ಎಂಬ ಕತ್ತಿ ಕುತ್ತಿಗೆಗೆ ಬಡಿಯುತ್ತಿದೆ. ಈ ಸಂದರ್ಭದಲ್ಲಿ ಆಳುವ ಸರ್ಕಾರ ಎಚ್ಚೆತ್ತು ಕೆಲಸ ಮಾಡಬೇಕಾಗಿದೆ. ದಿನ ನಿತ್ಯದ ವಸ್ತುಗಳ ದರ ಕಡಿಮೆ ಮಾಡಿ, ಬಡವರು ಹಾಗೂ ನಿರ್ಗತಿಕರ ಕಣ್ಣೀರು ಒರೆಸುವ ಯೋಜನೆಗಳನ್ನು ಸರ್ಕಾರ ರಚಿಸಬೇಕಾಗಿದೆ, ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಾದ ಅವಶ್ಯಕತೆ ಕೂಡಾ ಇದೆ ಎಂಬುದು ಬೆಳಗಾಯ ವಾಯ್ಸ್ ಅಭಿಲಾಷೆ.
ನಮ್ಮ What’s App ಗ್ರುಪ್ ಸೇರಲು ಕೆಳಗಿನ ಲಿಂಕ್ ಒತ್ತಿ https://chat.whatsapp.com/H8bMnu7sdb645AO4X57ZRe