ಉದ್ಯಮ ಬೆಳೆದಂತೆ ದೇಶ ಬದಲಾಗುತ್ತದೆ : ಶಾಸಕ ಅನಿಲ ಬೆನಕೆ
ಬೆಳಗಾವಿ : ಬೆಳಗಾವಿಯಲ್ಲಿ ಹೋಟೆಲ ಉದ್ಯಮ ಗಮನ ಸೆಳೆಯುತ್ತಿದ್ದು, ಅತ್ಯುತ್ತಮ ಗುಣಮಟ್ಟ ಹಾಗೂ ಸ್ವಚ್ಛತೆಗೆ ಜನಸಾಮಾನ್ಯರು ಆಕರ್ಷಿತರಾಗಿದ್ದಾರೆ ಈ ರೀತಿಯ ಉದ್ಯಮಗಳು ಬೆಳೆದರೆ ದೇಶ ಬದಲಾಗುತ್ತದೆ ಎಂದು ಬೆಳಗಾವಿ ಉತ್ತರ ಕ್ಷೇತ ಶಾಸಕ ಅನಿಲ್ ಬೆನಕೆ ಹೇಳಿದರು .
ಅವರು ಇಂದು ನಗರದ ಬಾಕ್ಸೈಟ್ ರಸ್ತೆಯ ರಿಲಯನ್ಸ್ ಮಾಲ್ ನ ಮೊದಲ ಮಹಡಿಯಲ್ಲಿ ನಾಳೆ ದಿ.7 ರಂದು ” ಸ್ಟೀಮ್ & ಬನ್ ಕೆಫೆ” ಉದ್ಘಾಟನೆಗೊಳಿಸಿ ಮಾತನಾಡುತ್ತಾ ನಗರದಲ್ಲಿ ಉದ್ಯಮಗಳು ಬೆಳೆಯುವಲ್ಲಿ ನಾವೆಲ್ಲಾ ಸಹಕರಿಸುತ್ತೇವೆ ಎಂದರು.
ಮುಖ್ಯ ಅತಿಥಿಗಳಾಗಿ ಬೆಳಗಾವಿ ಸಂಸದೆ ಮಂಗಳ ಅಂಗಡಿ ಮಾತನಾಡಿ, ಬೆಳಗಾವಿಯಲ್ಲಿ ಉದ್ಯಮಗಳ ಬೆಳವಣಿಗೆ ಕೇಂದ್ರದಿಂದ ಬೇಕಾಗುವ ಸೌಲಭ್ಯಗಳನ್ನು ಒದಗಿಸುವಲ್ಲಿ ಸಿದ್ಧ ಎಂದರು.
ಸಂಸ್ಥಾಪಕ ಕೆ ಸೋಮಶೇಖರ್ ಮಾತನಾಡಿ ಬೆಳಗಾವಿಯ ಜನರ ನಾಡಿಮಿಡಿತವನ್ನು ಅರಿತು ಹೋಟೆಲ ಉದ್ಯಮವನ್ನು ಸ್ಥಾಪಿಸಿದ್ದು ಶೀಘ್ರದಲ್ಲಿಯೇ ಟೀಮ್ ಬಂದ ಜನರ ಗಮನ ಸೆಳೆಯಳಿದೆ ಎಂದರು.
ಎಂಪವರ್ ಇಂಡಿಯಾ ಟ್ರೈನರ್ ಪ್ರೈವೇಟ್ ಲಿಮಿಟೆಡ್ ನ ಚೇರಮನ್ ಘನಶ್ಯಾಮ್ ಕೊಳಂಬೆ , ನೆಲ್ಸನ್ ಮಂಡೇಲಾ ನೊಬೆಲ್ ಪ್ರೈಸ್ ಅಕಾಡೆಮಿಯ ವೈಸ್ ಪ್ರೆಸಿಡೆಂಟ್ ಡಾ. ವಿಜಯ ಪಾಟೀಲ, ಶಕೀಲ ಧಾರವಾಡಕರ, ಕೆ. ರಾಜಶೇಖರ, ಸಂದೀಪ ಮಾಡಲಗಿ, ರಾಜೇಂದ್ರಕುಮಾರ ಸುತಾರ ಈ ವೇಳೆ ವೇದಿಕೆ ಮೇಲೆ ಹಾಜರಿದ್ದು ಹೊಸ ಉದ್ಯಮಕ್ಕೆ ಶುಭ ಕೋರಿದರು.