ಬೆಳಗಾವಿ ಪಾಲಿಕೆಯಲ್ಲಿ ಕಮಲ ಅರಳಲು ಉಪಯೋಗಿಸಿದ ಅಸಲಿ ತಂತ್ರ..?
ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸುವ ಮೂಲಕ ಮೊದಲಬಾರಿಗೆ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಮಟ್ಟದ ಜಯ ಗಳಿಸಲು ಮಾಡಿದ ತಂತ್ರ ಏನು ಅಂತಿರಾ ಹಾಗಾದ್ರೆ ಈ ಸ್ಟೋರಿ ಓದಿ.
ಇದೇ ಮೊದಲಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಚಿನ್ಹೆಯ ಮೇಲೆ ಚುನಾವಣೆ ಎದುರಿಸಿವೆ. ಆದರೆ ಇಲ್ಲಿಯವರೆಗೆ ಎಂಇಎಸ್ ಪಾಲಿಕೆ ಮೇಲಿನ ಹಿಡಿತವನ್ನು ಬಿಟ್ಟುಕೊಟ್ಟಿರಲಿಲ್ಲ. ಈ ಬಾರಿಯೂ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲು ಯತ್ನಿಸಿದ ಎಂಇಎಸ್ ಗೆ ಬಾರಿ ಮುಖಭಂಗವಾಗಿದೆ. ಈ ರೀತಿಯ ಹೀನಾಯ ಸೋಲು ಅನುಭವಿಸಲು ನೂರಾರು ಕಾರಣ ನೀಡಬಹುದು. ಆದರೆ ಬಿಜೆಪಿ ಗೆಲುವಿನ ಹಿಂದೆ ಅನುಸರಿಸಿದ ತಂತ್ರವನ್ನು ಮಾತ್ರ
ಗಮನಿಸಬೇಕು.
ಕಾರ್ಯಕರ್ತರನ್ನು ಗೆಲ್ಲಿಸಲು ಸಮಯ ನೀಡುವಂತೆ ಸೂಚಿಸಿದ್ದ ಕಟೀಲ್ : ಹೌದು ಯಾವುದೇ ಚುನಾವಣೆಯಾಗಲಿ ನಿರಂತರ ಶ್ರಮ ವಹಿಸಿ ತಮ್ಮ ನಾಯಕನನ್ನು ಗೆಲ್ಲಿಸುವ ನಿಷ್ಠಾವಂತ ಕಾರ್ಯಕರ್ತರ ಚುನಾವಣೆಯನ್ನು ಎಲ್ಲಾ ಜನಪ್ರತಿನಿಧಿಗಳು ಆಸಕ್ತಿ ವಹಿಸಿ ಕೆಲಸ ಮಾಡಬೇಕು, ಕಾರ್ಯಕರ್ತರ ಗೆಲುವಿಗೆ ಶ್ರಮವಹಿಸಬೇಕು ಚುನಾವಣೆ ಮುಗಿಯುವವರೆಗೂ ಎಲ್ಲಿಯೂ ಪ್ರವಾಸ ಮಾಡದೇ ಬೆಳಗಾವಿಯಲ್ಲಿ ಇದ್ದುಕೊಂಡು ಕೆಲಸ ಮಾಡಬೇಕು ಎಂಬ ಸಂದೇಶ ವನ್ನು ರಾಜ್ಯಾಧ್ಯಕ್ಷ ಕಟೀಲ್ ನೀಡಿದ್ದರು. ಈ ಪ್ರಕಾರ ಬಿಜೆಪಿ ನಾಯಕರು ಪ್ರಚಾರದಲ್ಲಿ ಪಾಲ್ಗೊಂಡಿದ್ದರ ಪರಿಣಾಮ ಈ ಮಹತ್ವದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಪಾಲಿಕೆ ಚುನಾವಣೆ ಸವಾಲಾಗಿ ಸ್ವೀಕರಿಸಿದ್ದ ಶಾಸಕ ಅಭಯ್ ಪಾಟೀಲ್ : ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರಿಗೆ ಈ ಮಹತ್ವದ ಗೆಲುವಿನ ಅರ್ಧ ಶ್ರೇಯ ಸಲ್ಲುತ್ತದೆ. ಟಿಕೆಟ್ ಹಂಚಿಕೆ ಹಿಡಿದು ಮತದಾನದವರೆಗೂ ನಿಗಾವಹಿಸಿ ತಮ್ಮ ಕರ್ತವ್ಯ ನಿರ್ವಹಿಸಿದರು. ಜೊತೆಗೆ ಬಂಡಾಯ ಅಭ್ಯರ್ಥಿಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಕೇವಲ ತಮ್ಮ ಅಭ್ಯರ್ಥಿಗಳ ಗೆಲುವುಗೆ ಶಕ್ತಿ ವಿನಿಯೋಗ ಮಾಡಿದರು. ಇದರ ಪರಿಣಾಮವೇ ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ಸ್ಥಾನವನ್ನು ಬಿಜೆಪಿ ಗಳಿಸಿದೆ.
ಕಾರ್ಯಕರ್ತರ ಹುಮ್ಮಸ್ಸು : ಬಿಜೆಪಿ ಕಾರ್ಯಕರ್ತರು ಚುನಾವಣೆಯನ್ನು ಹಬ್ಬದಂತೆ ಆಚರಿಸುತ್ತಾರೆ. ಅಭ್ಯರ್ಥಿ ಯಾರೇ ಆದರು ತಲೆಕೆಡಿಸಿಕೊಳ್ಳದೆ ತಮ್ಮ ಕೆಲಸ ಮಾಡುತ್ತಾರೆ. ಈ ರೀತಿ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರತಿ ಮನೆ ಮನೆಗೂ ತಮ್ಮ ಅಭ್ಯರ್ಥಿ ಪರ ಪ್ರಚಾರ ಮಾಡಿ ಮತಯಾಚಿಸಿದ್ದಾರೆ. ಈ ಅಂಶವು ಬಿಜೆಪಿಗೆ ವರದಾನವಾಗಿದೆ. ಒಟ್ಟಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದ್ದು, ಅಭಿವೃದ್ಧಿ ಮಾಡಲಿ ಎಂಬುದು ಎಲ್ಲರ ಆಶಯ.
ನಮ್ಮ What’s App ಗ್ರುಪ್ ಸೇರಲು ಕೆಳಗಿನ ಲಿಂಕ್ ಒತ್ತಿ https://chat.whatsapp.com/H8bMnu7sdb645AO4X57ZRe