ಮೊದಲ ಬಾರಿ ಪಾಲಿಕೆಗೆ ಏಂಟ್ರಿ ಕೊಟ್ಟ ವಾಣಿ ವಿಲಾಸ್ ಜೋಶಿ
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಹೊಸ ಮುಖಗಳು ಆಯ್ಕೆಯಾಗಿದ್ದು ಮೊದಲ ಬಾರಿಗೆ ವಾರ್ಡ್ ನಂ 43 ರಿಂದ ವಾಣಿ ವಿಲಾಸ್ ಜೋಶಿ ಪಾಲಿಕೆಗೆ ಎಂಟ್ರಿ ಕೊಟ್ಟಿದ್ದಾರೆ.
ಅಭಿವೃದ್ಧಿಯನ್ನು ತಮ್ಮ ಮೂಲ ಮಂತ್ರವಾಗಿಸಿಕೊಂಡಿರುವ ವಾಣಿ ಜೋಶಿ, ಮೊದಲಿನಿಂದಲೂ ಕ್ಷೇತ್ರದ ಜನರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ನಗರಸೇವಕಿಯಾಗಿ ಆಯ್ಕೆಯಾದ ನಂತರ ಪ್ರತಿಕ್ರಿಯೆ ನೀಡಿದ ಇವರು ಜನ ನನ್ನ ಮೇಲೆ ಬರವಸೆ ಇಟ್ಟು ಈ ಬಾರಿ ಆಯ್ಕೆ ಮಾಡಿದ್ದಾರೆ. ನನ್ನ ವಾರ್ಡ್ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಮ್ಮ ಗೆಲುವಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.