
ಪಾಲಿಕೆಯ ನೂತನ ಸದಸ್ಯರು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ : ಹುಕ್ಕೇರಿ ಶ್ರೀಗಳು

ಬೆಳಗಾವಿ : ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅತೀ ಹೆಚ್ಚು ಬಿಜೆಪಿ ಅಭ್ಯರ್ಥಿಗಳೇ ಆಯ್ಕೆಯಾಗುವ ಮೂಲಕ ಜನರ ನಿರೀಕ್ಷೆಯನ್ನು ನೂತನ ಸದಸ್ಯರು ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ನಗರದ ರಾಮತೀರ್ಥ ನಗರದ ವೀರಭದ್ರ ದೇವಸ್ಥಾನದಲ್ಲಿ ವಾರ್ಡ್ ನಂಬರ್ 46ರ ನೂತನ ಸದಸ್ಯ ಹನುಮಂತ ಕೊಂಗಾಲಿ ಅವರು ಶ್ರೀಗಳ ಆಶೀರ್ವಾದ ಪಡೆದ ಬಳಿಕ ಶ್ರೀಗಳು ಮಾತನಾಡಿದರು.
ಬೆಳಗಾವಿ ಎರಡನೇ ರಾಜಧಾನಿ ಅಭಿವೃದ್ಧಿಯ ದೃಷ್ಟಿಯಿಂದ ಯಾವಗಲೂ ಕೂಡ ಹಿಂದೆ ಬಿದಿದ್ದೆ. ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕು. ಬೆಳಗಾವಿ ಮಹಾನಗರ ಪಾಲಿಕೆಗೆ ಅತೀ ಹೆಚ್ಚು ಬಿಜೆಪಿ ಸದಸ್ಯರು ಆಯ್ಕೆಯಾಗಿರುವುದು ಅಭಿಮಾನದ ಸಂಗತಿ. ಬೆಳಗಾವಿ ನಗರವನ್ನು ಇನಷ್ಟು ಹೆಚ್ಚು ಅಭಿವೃದ್ಧಿ ಮಾಡುವುದರ ಮೂಲಕ ಜನರ ಸಂಕಷ್ಟಕ್ಕೆ ಸ್ಪಂಧಿಸಬೇಕೆಂದು ಸಂದೇಶ ನೀಡಿದರು.
ಈರಯ್ಯ ಕೋತ, ಮಹಾಂತೇಶ ಒಕ್ಕುಂದ, ಪವನಕುಮಾರ ಶಾಸ್ತ್ರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.