ಬೆಳಗಾವಿ ಗ್ರಾಮೀಣದಲ್ಲಿ ನೈಟ್ ಪೊಲಿಟಿಕ್ಸ್ ಪ್ರಾರಂಭಿಸಿದ್ದು ಯಾರು….,? ಬಿಜೆಪಿಗರ ಪ್ರಶ್ನೆ
ಬೆಳಗಾವಿ : ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಎರಡು ಬಾರಿ ಅಯ್ಕೆಯಾಗಿ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿ ಪಡಿಸಿ ಸೈ ಎನ್ನಿಸಿಕೊಂಡಿದ್ದ ಮಾಜಿ ಶಾಸಕ ಸಂಜಯ ಪಾಟೀಲ ಅವರು ಶಾಸಕರಾಗಿದ್ದ ವೇಳೆ ಗ್ರಾಪಂ ಸದಸ್ಯೆಯೂ ಅಗಿರದ ಈಗೀನ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ರಾಜ್ಯದಲ್ಲಿ ಆಗ ಸಿದ್ದರಾಮಯ್ಯ ಸರಕಾರ ಇದ್ದ ಕಾರಣ ಅಂದಿನ ಶಾಸಕರಾಗಿದ್ದ ಸಂಜಯ ಪಾಟೀಲ ಕ್ಷೇತ್ರದಲ್ಲಿ ಇವರು ಮಾಡಿದ್ದು ಹಗಲು ರಾಜಕೀಯವಾ ಅಥವಾ ನೇರಾ ನೇರ ರಾಜಕೀಯವಾ ಎಂದು ಬಿಜೆಪಿ ಕಾರ್ಯಕರ್ತರು ಹೆಬ್ಬಾಳಕರ ಹಾಗೂ ಕಾಂಗ್ರೆಸ್ ವಿರುದ್ಧ ಸೆಡ್ಡು ಹೊಡೆದಿದ್ದಾರೆ.
ಬ್ಯಾನರ್ ಪೊಲಿಟಿಕ್ಸ್ ಪ್ರಾರಂಭಿಸಿದ್ದು ಯಾರು : ಬಿಜೆಪಿ ಕಾರ್ಯಕರ್ತರು ಹೇಳುವ ಪ್ರಕಾರ ಬೆಳಗಾವಿಯಲ್ಲಿ ಬ್ಯಾನರ್ ಪೊಲಿಟಿಕ್ಸ್ ಪ್ರಾರಂಭ ಮಾಡಿದ್ದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್. ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಯೋಜನೆಯಾದ ಜಲ ಜೀವನ್ ಮಿಶನ್ ಅಡಿಯಲ್ಲಿ ರಾಜ್ಯದ ಸಹಯೋಗದೊಂದಿಗೆ ಬಂದ ಯೋಜನೆಯನ್ನು ರಾಜಕೀಯ ಲಾಭ ಪಡೆಯಲು ಶಾಸಕಿ ಹೆಬ್ಬಾಳ್ಕರ್ ಮೂಲ ಕಾರಣ ಎಂಬುದು. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದಿನ ಸಿಎಂ ಯಡಿಯೂರಪ್ಪ ಅವರಿಲ್ಲದೆ ಈ ಯೋಜನೆ ಹೇಗೆ ಕ್ಷೇತ್ರ ತಲುಪಿತ್ತು ಎಂಬುದು ಬಿಜೆಪಿ ವಾದ.
ರಾಜಕೀಯದಲ್ಲಿ ಯಾರು ಶತ್ರುವೂ ಅಲ್ಲ. ಯಾರೂ ಮಿತ್ರರೂ ಅಲ್ಲಾ. ಆದ್ರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಪ್ರಸ್ತುತ ಶಾಸಕರಾಗಿರುವುದು ಲಕ್ಷ್ಮೀ ಹೆಬ್ಬಾಳಕರ. ಇಲ್ಲಿ ಸಂಜಯ ಪಾಟೀಲ ಅವರು ಈ ಹಿಂದೆ ಹೆಬ್ಬಾಳಕರ ಮಾಡಿದ ಹಾಗೆ ಮಾಡ ಬಹುದಿತ್ತು. ಕಾರಣ ರಾಜ್ಯದಲ್ಲಿರುವುದು ಬಿಜೆಪಿ ಸರಕಾರ. ಒಬ್ಬ ಮಹಿಳೆ ಶಾಸಕರಾಗಿದ್ದಾರೆ. ಬೇಡ ಎಂದು ಸುಮ್ಮನಿರುವ ಸಂಜಯ. ಹೆಬ್ಬಾಳಕರ ಮಾಡಿದ ಹಾಗೆ ಮಾಡಿದ್ರೆ ಅವರು ಈಗ ರಾತ್ರಿ ಅಲ್ಲಾ.. ಹಗಲು ರಾಜಕಾರಣ ಮಾಡಬಹುದಿತ್ತು. ಆದ್ರೆ ಬಿಜೆಪಿ ಸಂಸ್ಕೃತಿಯ ಮಹಿಳೆಗೆ ಗೌರವ ಕೊಡುವ ಉದ್ದೇಶದಿಂದ ದೂರ ಉಳಿದಿದ್ದಾರೆ. ಆದರೆ ಗ್ರಾಮೀಣ ಜನರ ಸಂಕಷ್ಟಕ್ಕೆ ಸದಾ ಎತ್ತಿದ ಕೈ ಸಂಜಯ ಪಾಟೀಲ ಹಂತವರಿಗೆ ಕಾಂಗ್ರೆಸ್ ಮಾಡುವುದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ ಎಂದು ಬಿಜೆಪಿ ಕಾರ್ಯಕರ್ತರು ಮಾತ್ನಾಡಿಕೊಳ್ತಿದ್ದಾರೆ.
ಸಂಜಯ್ ಪಾಟೀಲ್ ಅಭಿಪ್ರಾಯ : ಬಿಜೆಪಿ ಪಕ್ಷದ ಸಿದ್ದಾಂತ ಒಂದೇ ನಮಗೆ ದೇಶ ಸರ್ವಾಂಗೀಣ ಅಭಿವೃದ್ಧಿ ಮುಖ್ಯ. ನಾವು ಪ್ರತಿನಿಧಿಸುವ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಆಶೋತ್ತರಗಳನ್ನು ಮನಗಂಡು ರಾಜಕಾರಣ ಮಾಡುವವರು. ಇಲ್ಲಿ ನೈಟ್ ಪೊಲಿಟಿಕ್ಸ್ ತಂದವರು ಯಾರು…? ಕ್ಷೇತ್ರದ ಜನರಿಗೆ ಮೊದಲು ಉತ್ತರ ನೀಡಬೇಕು ಎಂಬುದು ಅವರ ವಾದ.