Select Page

ಅಥಣಿ : ಕಡೆಗೂ ಬದುಕುಳಿಯಲಿಲ್ಲ ಎರಡು ವರ್ಷದ ಕಂದಮ್ಮ

ಅಥಣಿ : ಕಡೆಗೂ ಬದುಕುಳಿಯಲಿಲ್ಲ ಎರಡು ವರ್ಷದ ಕಂದಮ್ಮ

ಅಥಣಿ : ತಾಲೂಕಿನ ಹಲ್ಯಾಳ ಗ್ರಾಮದ ಕಬ್ಬಿನ ತೋಟದಲ್ಲಿ ಸಿಕ್ಕಿದ್ದ 2 ವರ್ಷದ ಹೆಣ್ಣುಮಗು ಸಾವನಪ್ಪಿದ್ದು, ಇಲ್ಲಿಯವರೆಗೆ ಮಗುವಿನ ಪೋಷಕರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಕಳೆದ ಒಂದು ವಾರದ ಹಿಂದೆ ಅಥಣಿ – ಗೋಕಾಕ್ ರಸ್ತೆಯ ದರೂದ ಸೇತುವೆ ಬಳಿ ಕಬ್ಬಿನ ಗದ್ದೆಯಲ್ಲಿ ಸುಟ್ಟ ಗಾಯದಲ್ಲಿ ಮಗು ಪತ್ತೆಯಾಗಿತ್ತು. ಸ್ಥಳೀಯರು ಮಗುವನ್ನು ರಕ್ಷಿಸಿ ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಕುರಿತು ಅಥಣಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು ಇಲ್ಲಿಯವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಪೋಷಕರ ಮಾಹಿತಿ ಸಿಗುವ ಮುಂಚೆ ಮಗು ಇಹಲೋಕ ತ್ಯಜಿಸಿದೆ.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಗುವಿನ ಗುರುತಿಗೆ ಎಫ್‌ಎಸ್‌ಎಲ್ ಬೆಂಗಳೂರಿಗೆ ಸ್ಯಾಂಪಲ್ ರವಾನಿಸಿದ್ದರಾದರು, ವಿಡಿಯೋ ಕ್ಲಿಯರ್ ಇಲ್ಲದಕ್ಕೆ ಸ್ಯಾಂಪಲ್ ಎಫ್‌ಎಸ್‌ಎಲ್ ರಿಜೆಕ್ಟ್ ಮಾಡಿತ್ತು. ಸಧ್ಯ ಮಗುವಿನ ಮೃತದೇಹವನ್ನು ಶವಾಗಾರಕ್ಕೆ ಶಿಪ್ಟ್ ಮಾಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!