Video – ಸತೀಶ್ ಜಾರಿಹೊಳಿ ಸಿಎಂ ಆದರೂ ಸ್ವಾಗತ ; ಕುತೂಹಲ ಮೂಡಿಸಿದ ಸವದಿ ಹೇಳಿಕೆ
ಬೆಳಗಾವಿ : ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರದು ವೈಯಕ್ತಿಕವಾಗಿ ಯಾವುದೇ ಪಾತ್ರ ಇಲ್ಲ. ಸಿಎಂ ಬದಲಾವಣೆ ಪ್ರಶ್ನೆ ಇಲ್ಲ ಒಂದುವೇಳೆ ಬೆಳಗಾವಿಯಿಂದ ಯಾರೇ ಸಿಎಂ ಆದರೂ ಸ್ವಾಗತ ಮಾಡುತ್ತೇನೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.
ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೆಸರು ಸಿಎಂ ಹುದ್ದೆಗೆ ಕೇಳಿಬರುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು. ಜಿಲ್ಲೆಯಿಂದ ಯಾರೇ ಸಿಎಂ ಆದರೂ ನಾನು ಸ್ವಾಗತ ಮಾಡುತ್ತೇನೆ ಎಂದರು.
ಸರ್ಕಾರದಲ್ಲಿ ಅನುದಾನ ಕೊರತೆ ವಿಚಾರವಾಗಿ ಮಾತನಾಡಿ, ಕಳೆದ ಎರಡು ವರ್ಷದಲ್ಲಿ ಕೋಟ್ಯಾಂತರ ರು. ಅನುದಾನ ನೀಡಿದ್ದು ನನಗೆ ಯಾವುದೇ ಅನುದಾನ ಕೊರತೆ ಆಗಿಲ್ಲ ಎಂದು ಲಕ್ಷ್ಮಣ ಸವದಿ ಅಭಿಪ್ರಾಯಪಟ್ಟರು.
ಸಚಿವಸ್ಥಾನ ವಿಚಾರವಾಗಿ ಮಾತನಾಡಿದ ಇವರು. ರಾಜ್ಯದ ಉಪಮುಖ್ಯಮಂತ್ರಿ ಹುದ್ದೆ ಸೇರಿದಂತೆ ಅನೇಕ ಜವಾಬ್ದಾರಿ ನಿಭಾಯಿಸಿದ ನನಗೆ ಯಾವುದೇ ಹುದ್ದೆಯ ಆಸೆ ಇಲ್ಲ. ಮುಂದಿನ ದಿನಮಾನದಲ್ಲಿ ಒಳ್ಳೆಯ ದಿನಗಳು ಬರುವ ವಿಶ್ವಾಸ ಇದೆ ಎಂದು ಮಾರ್ಮಿಕವಾಗಿ ನುಡಿದರು.