Select Page

Advertisement

ಬೈಲಹೊಂಗಲ ಪುರಸಭೆ ಚುನಾವಣೆ ; ಅಧ್ಯಕ್ಷರಾಗಿ ಹೊಸ ದಾಖಲೆ ಬರೆದ ವಿಜಯ ಬೋಳನ್ನವರ

ಬೈಲಹೊಂಗಲ ಪುರಸಭೆ ಚುನಾವಣೆ ; ಅಧ್ಯಕ್ಷರಾಗಿ ಹೊಸ ದಾಖಲೆ ಬರೆದ ವಿಜಯ ಬೋಳನ್ನವರ

ಬೈಲಹೊಂಗಲ : ತೀವ್ರ ಕುತೂಹಲ ಮೂಡಿಸಿದ್ದ ಬೈಲಹೊಂಗಲ
ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪುರಸಭೆ ಇತಿಹಾಸದಲ್ಲಿಯೇ ಅತೀ ಕಿರಿಯ

ವಯಸ್ಸಿನ ಅಧ್ಯಕ್ಷರಾಗಿ 32 ವಯಸ್ಸಿನ ವಿಜಯ ಶ್ರೀಶೈಲ ಬೋಳನ್ನವರ ಅವಿರೋಧ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು.

ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶಾಸಕ ಮಹಾಂತೇಶ ಕೌಜಲಗಿ ಸಮ್ಮುಖದಲ್ಲಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ವಿಜಯ್ ಬೋಳಣ್ಣವರ ಹಾಗೂ ಉಪಾಧ್ಯಕ್ಷರಾಗಿ

ಬುಡ್ಡೆಸಾಬ ಫಕ್ರುಸಾಬ ಶಿರಸಂಗಿ ಅವಿರೋಧ ಆಯ್ಕೆ ಮಾಡಲಾಯಿತು. ಒಟ್ಟು 27 ಸದಸ್ಯ ಬಲದ ಬೈಲಹೊಂಗಲ ಪುರಸಭೆಯಲ್ಲಿ ಕಾಂಗ್ರೆಸ್ – 18 ಹಾಗೂ ಬಿಜೆಪಿಯ 09 ಜನ ಸದಸ್ಯರಿದ್ದರು.

ಪುರಸಭೆಯ ಸಭಾಭವನದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾದ ಹಿನ್ನಲೆಯಲ್ಲಿ ಚುನಾವಣಾಧಿಕಾರಿ,

ತಹಶೀಲ್ದಾರ್ ಎಚ್ ಎನ್ ಶಿರಹಟ್ಟಿ ಅವಿರೋಧ ಆಯ್ಕೆ ಘೋಷಸಿದರು. ವಿಜಯ ಬೋಳನ್ನವರ ಪುರಸಭೆಯ ಇತಿಹಾಸದಲ್ಲಿಯೇ ಅತೀ ಕಿರಿಯ ವಯಸ್ಸಿನ ಅಧ್ಯಕ್ಷರಾಗಿ ಆಯ್ಕೆಯಾದ ಹೆಗ್ಗಳಿಕೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಬೇರೆ ಕಡೆಗಳಲ್ಲಿ ಚುನಾವಣೆ ಜರಗುತ್ತವೆ, ಆದರೆ ನಮ್ಮಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಆಯ್ಕೆ ನಡೆಯತ್ತದೆ.
ಬೈಲಹೊಂಗಲ ಪುರಸಭೆ ಈಗಾಗಲೇ ಸ್ವಚ್ಛತೆಯಲ್ಲಿ ಜಿಲ್ಲೆಗೆ

ಪ್ರಥಮ ಸ್ಥಾನ, ರಾಜ್ಯಕ್ಕೆ ದ್ವಿತೀಯ ಸ್ಥಾನದಲ್ಲಿದೆ. ಮುಂಬರುವ ದಿನಮಾನದಲ್ಲಿ ಸರ್ವ ಸದಸ್ಯರು ಸೇರಿಕೊಂಡು ರಾಜ್ಯಕ್ಕೆ ಪ್ರಥಮ ಸ್ಥಾನ ಲಭಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಪುರಸಭೆ ಆಡಳಿತ ವ್ಯವಸ್ಥೆಗೆ ನನ್ನ ಸಂಪೂರ್ಣ ಸಹಕಾರವಿದ್ದು ಎಲ್ಲಾ ಸದಸ್ಯರು ಹಿರಿಯರ ಮಾರ್ಗದರ್ಶನದಲ್ಲಿ ಪುರಸಭೆ ಅಭಿವೃದ್ದಿಗೆ ಒತ್ತು ನೀಡಬೇಕು. ಪಕ್ಷಭೇದ ಮಾಡದೆ ಪಟ್ಟಣದ ಅಭಿವೃದ್ದಿಗೆ ಮುಂದಾಗಬೇಕು. ನೂತನ ಅಧ್ಯಕ್ಷ, ಉಪಾಧ್ಯಕ್ಷರು ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

Advertisement

Leave a reply

Your email address will not be published. Required fields are marked *

error: Content is protected !!