ಮನೆ ಕುಸಿದು ಇಬ್ಬರ ಸಾವು : ಮೃತರ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ
ಯರಗಟ್ಟಿ : ಧಾರಾಕಾರ ಮಳೆಗೆ ತಾಲೂಕಿನ ಮಾಡಮಗೇರಿ ಗ್ರಾಮದಲ್ಲಿ ಮನೆ ಕುಸಿದು ಮೃತಪಟ್ಟಿದ್ದ ಕುಟುಂಬಕ್ಕೆ ತಾಲೂಕು ಆಡಳಿತ ವತಿಯಿಂದ ತಹಶಿಲ್ದಾರ ಮಹತೇಶ ಮಠದ ಹತ್ತು ಲಕ್ಷ ಪರಿಹಾರ ವಿತರಿಸಿದರು.
ಕಳೆದ ಶನಿವಾರ ಉಂಟಾದ ಭೀಕರ ಮಳೆಗೆ ಯರಗಟ್ಟಿ ತಾಲೂಕಿನ ಮಾಗಮಗೇರಿ ಗ್ರಾಮದ ಮಹಾದೇವ ಎಂಬುವವರ ಮನೆ ಕುಸಿದು, ಪ್ರಜ್ವಲ್ ಮಹಾದೇವ ಬಾಗಿಲದ (5). ಪತ್ನಿ ಯಲ್ಲವ್ವ ಮಹಾದೇವ ಬಾಗಿಲದ(40) ಸ್ಥಳದಲ್ಲೇ ಮೃತಪಟ್ಟರು. ಇನ್ನೂ ಇದೇ ಕುಟುಂಬದ ಉದ್ದವ್ವ ಹಾಗೂ ರೂಪಾ ಎಂಬುವವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದೆ.
ಘಟನೆಗೆ ತ್ವರಿತವಾಗಿ ಸ್ಪಂದಿಸಿದ ಯರಗಟ್ಟಿ ತಾಲೂಕಾಡಳಿತ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿತ್ತು. ಜೊತೆಗೆ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನಿಡಿದ್ದ ಫಳವಾಗಿ ಇಬ್ಬರು ಬದುಕುಳಿದಿದ್ದರು. ಸೋಮವಾರ ಮೃತ ಕುಟುಂಬದ ಸಂಬಂಧಿಕರಿಗೆ ತಾಲೂಕು ಆಡಳಿತದ ವತಿಯಿಂದ ಯರಗಟ್ಟಿ ತಹಶಿಲ್ದಾರ ಮಹಾಂತೇಶ ಮಠದ ಹತ್ತು ಲಕ್ಷ ರೂ ಪರಿಹಾರ ನೀಡಿದ್ದಾರೆ.
ಈ ಸಂದರ್ಭದಲ್ಲಿ ಯಲ್ಲಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಕಲ್ಲೋಳ್ಳೆಪ್ಪ ಶಿದ್ದಣ್ಣವರ, ಗ್ರಾಮಲೆಕ್ಕಾಧಿಕಾರಿ ಶಿವು ಮಠಪತಿ, ಕಂದಾಯ ನಿರೀಕ್ಷಕ ವಾಯ್. ಎಫ್. ಮುರ್ತೇನ್ನವರ, ಮಹೇಶ ಖಂಡ್ರಿ, ಅಣ್ಣಪ್ಪ ಹಾಲಗಿ, ಫಕ್ಕೀರಪ್ಪ ಖಂಡ್ರಿ, ಮಹಾದೇವ ಬಾಗಿಲದ ಉಪಸ್ಥಿತರಿದ್ದರು.